ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗುದದ್ವಾರದಲ್ಲಿ ಸಾಗಿಸುತ್ತಿದ್ದ 233 ಗ್ರಾಂ ಚಿನ್ನ ಜಪ್ತಿ

First Published 21, Feb 2018, 7:38 AM IST
Gold Seized at Bengaluru Airport
Highlights

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 95 ಲಕ್ಷ  ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಫೆ.20ರಂದು ದುಬೈ ನಿಂದ ಬಂದ ಎಮಿರೈಟ್ಸ್ ವಿಮಾನದಲ್ಲಿ ಬಂದ ಆರೋಪಿಯೊಬ್ಬ 895 ಗ್ರಾಂ ಚಿನ್ನ ಸಾಗಾಣೆ ಮಾಡುವಾಗ ಸಿಕ್ಕಿ ಬಿದ್ದಿ ದ್ದಾನೆ.

ಬೆಂಗಳೂರು: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 95 ಲಕ್ಷ  ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಫೆ.20ರಂದು ದುಬೈ ನಿಂದ ಬಂದ ಎಮಿರೈಟ್ಸ್ ವಿಮಾನದಲ್ಲಿ ಬಂದ ಆರೋಪಿಯೊಬ್ಬ 895 ಗ್ರಾಂ ಚಿನ್ನ ಸಾಗಾಣೆ ಮಾಡುವಾಗ ಸಿಕ್ಕಿ ಬಿದ್ದಿ ದ್ದಾನೆ.

ಕತಾಸ್ಲಿಂ ಆರಿಫ್ (21) ಬಂಧಿತ. ಆರೋಪಿಯಿಂದ 28 .43 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಆರೋಪಿ ಕಪ್ಪು ಕಾರ್ಬನ್ ಪೇಪರ್‌ಗೆ (ಫಾಯ್ಲ್) ಅಂಟಿಕೊಂಡಂತೆ ಬಂಗಾರದ ಪೇಪರ್ ಅಂಟಿಸಿದ್ದ. ಬಳಿಕ ಅದನ್ನು ಆಟಿಕೆ ಸಾಮಾನುಗಳ ಮೇಲೆ ಸುತ್ತಿ, ರಟ್ಟಿನ ಬಾಕ್ಸ್‌ಗಳಲ್ಲಿ ಇಟ್ಟಿದ್ದನು.

ಮತ್ತೊಂದು ಪ್ರಕರಣದಲ್ಲಿ ಗುದದ್ವಾರದಲ್ಲಿ ಚಿನ್ನ ಇಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಆರೋಪಿಯೊಬ್ಬ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದಿದ್ದಾನೆ. ಮೊಹಮ್ಮದ್ ತಲಿಬ್ ಅಹ್ಮದ್ ಬಂಧಿತನಾಗಿದ್ದು, ಈತನಿಂದ ಸುಮಾರು 7.41 ಲಕ್ಷ ಮೌಲ್ಯದ 233 ಗ್ರಾಂ ಜಪ್ತಿ ಮಾಡಲಾಗಿದೆ. ಆರೋಪಿ ದುಬೈನಿಂದ ವಿಮಾನ ಮೂಲಕ ಬೆಂಗಳೂರಿಗೆ ಬಂದಿದ್ದ. ಹೊರಗೆ ಬರುವಾಗ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಗುದದ್ವಾರದಲ್ಲಿ ಚಿನ್ನ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಇನ್ನು ಪ್ರಯಾಣಿಕನೊಬ್ಬ ಫೆ.18ರಂದು ಸಿಂಗಾಪುರದಿಂದ ಬೆಂಗಳೂರಿಗೆ ಬಂದಿದ್ದ.

ಈತ ವಿಮಾನ ಕ್ಯಾಬಿನ್ ಲಗೇಜ್ ಜಾಗದಲ್ಲಿ ತನ್ನ ಬ್ಯಾಗ್ ಇಟ್ಟಿದ್ದ. ವಿಮಾನ ಬೆಂಗಳೂರಿಗೆ ಬಂದಾಗ ಪ್ರಯಾಣಿಕ ಬ್ಯಾಗ್ ತೆಗೆದುಕೊಂಡು ಹೋಗಿರಲಿಲ್ಲ. ಗಗನ ಸಖಿಯರು ಬ್ಯಾಗ್ ತೆಗೆದು ಪರಿಶೀಲಿಸಿದಾಗ 60 ಲಕ್ಷ ಮೌಲ್ಯದ 1900 ಗ್ರಾಂ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ. ಇವುಗಳನ್ನು ಆರೋಪಿ ಟೇಪ್ ಸುತ್ತಿ ಇಟ್ಟಿದ್ದ. ತಪಾಸಣೆ ವೇಳೆ ಸಿಕ್ಕಿ ಬೀಳುತ್ತೇನೆ ಎಂಬ ಆತಂಕದಿಂದ ಇಲ್ಲಿಯೇ ಬಿಟ್ಟು ಹೋಗಿರಬಹುದೆಂದು ಅಧಿಕಾರಿ ಮಾಹಿತಿ ನೀಡಿದರು.

loader