ಚಿನ್ನದ ದರ ಬುಧವಾರ ಹೆಚ್ಚು ಇಳಿಕೆಯಾಗಿದ್ದು, 5 ತಿಂಗಳ ಕನಿಷ್ಠಕ್ಕಿಳಿದಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 2795 ರು.ಗೆ ಇಳಿದಿದೆ. ಇನ್ನು ದಿಲ್ಲಿಯಲ್ಲಿ 10  ಗ್ರಾಂಗೆ 30,800 ರು. ಆಗಿದೆ. 

ನವದೆಹಲಿ: ಚಿನ್ನದ ದರ ಬುಧವಾರ 250 ರು. ಇಳಿಕೆಯಾಗಿದ್ದು, 5 ತಿಂಗಳ ಕನಿಷ್ಠಕ್ಕಿಳಿದಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 2795 ರು.ಗೆ ಇಳಿದಿದೆ. ಇನ್ನು ದಿಲ್ಲಿಯಲ್ಲಿ 10 ಗ್ರಾಂಗೆ 30,800 ರು. ಆಗಿದೆ. 

Add Asianetnews Kannada as a Preferred SourcegooglePreferred

ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣಗಳಿಗೆ ಬೇಡಿಕೆ ಕುಸಿದಿರುವುದು ಹಾಗೂ ಜಾಗತಿಕವಾಗಿಯೂ ಚಿನ್ನದ ಮಾರುಕಟ್ಟೆ ಕುಸಿದಿರುವುದು ಚಿನ್ನದ ದರ ಇಳಿಕೆಗೆ ಕಾರಣವಾಗಿದೆ. 

ಇದೇ ವೇಳೆ ದಿಲ್ಲಿಯಲ್ಲಿ ಬೆಳ್ಳಿ ಕೂಡ ಪ್ರತಿ ಕೆ.ಜಿಗೆ 620 ರು. ಕುಸಿದಿದ್ದು, 39,200 ರು. ಆಗಿದೆ. 2018ರ ಫೆಬ್ರವರಿಯಲ್ಲಿ ಚಿನ್ನ ಈ ದರವನ್ನು ಮುಟ್ಟಿತ್ತು. ಮಂಗಳವಾರ ಕೂಡ ಚಿನ್ನದ ದರ 100 ರು. ಇಳಿಕೆ ದಾಖಲಿಸಿತ್ತು.