ಕಳೆದ 2 ವಾರದಿಂದ ಚಿನ್ನದ ಬೆಲೆ ಕುಸಿತ ಕಂಡಿದ್ದು, ಪ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರಾನ್ ಜಯಗಳಿಸಿದ ಕಾರಣ ಕೂಡ  ಬೆಲೆ ಇಳಿತಕ್ಕೆ ಕಾರಣವಾಗಿದೆ.

ಮುಂಬೈ(ಏ.24): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಹಾಗೂ ರೂಪಾಯಿ ಬೆಲೆಯಲ್ಲಿ ಏರಿಳಿಕೆಯಾದ ಕಾರಣ ಚಿನ್ನದ ಬೆಲೆ ಪ್ರತಿ 10 ಗ್ರಾಂ'ನಲ್ಲಿ 245 ರೂ. ಇಳಿಕೆ ಕಂಡಿದೆ. 10 ಗ್ರಾಂ ರೂ.29495 ಇದ್ದ ಬೆಲೆ ರೂ. 29250ಕ್ಕೆ ಇಳಿದಿದೆ.

ಕಳೆದ 2 ವಾರದಿಂದ ಚಿನ್ನದ ಬೆಲೆ ಕುಸಿತ ಕಂಡಿದ್ದು, ಪ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರಾನ್ ಜಯಗಳಿಸಿದ ಕಾರಣ ಕೂಡ ಬೆಲೆ ಇಳಿತಕ್ಕೆ ಕಾರಣವಾಗಿದೆ.