ಕಳೆದ ಒಂದು ವಾರದಿಂದ ಆಭರಣ ತಯಾರಕರ ಕಡಿಮೆ ಬೇಡಿಕೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವುದರಿಂದ
ನವದೆಹಲಿ(ಫೆ.15): ಚಿನ್ನ ಹಾಗೂ ಬೆಳ್ಳಿ ಖರೀದಿಸುವವರಿಗೆ ಈಗ ಸಿಹಿ ಸುದ್ದಿ. ಕಳೆದ ಒಂದು ವಾರದಿಂದ ಆಭರಣ ತಯಾರಕರ ಕಡಿಮೆ ಬೇಡಿಕೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವುದರಿಂದ ಪ್ರತಿ 10 ಗ್ರಾಂಗೆ 300 ರೂ. ಕಡಿಮೆಯಾಗಿದೆ. ಪ್ರಸ್ತುತ ಚಿನ್ನದ ದರ 10 ಗ್ರಾಂ'ಗೆ 29,650 ರೂ.ಇದೆ. ಬೆಳ್ಳಿಯ ದರ ಕೂಡ ಇಳಿಕೆಯಾಗಿದ್ದು ಪ್ರತಿ ಕೆಜಿಗೆ 42,900 ರೂ.ಬೆಲೆಯಿದೆ.
