ನಿಮ್ಮಲ್ಲಿರುವ ಪೇಟಿಎಂ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿ 24ಕೆ 999.9 ಶುದ್ಧ ಚಿನ್ನವನ್ನು ಆನ್‌ಲೈನ್ ಮೂಲಕ ಖರೀದಿಸಿ, ಎಂಎಂಟಿಸಿ-ಪಿಎಎಂಪಿಯಲ್ಲಿ ಉಚಿತವಾಗಿ ಭದ್ರವಾಗಿ ಠೇವಣಿಯಿಡಬಹುದು.

ನವದೆಹಲಿ(ಏ.27): ಭಾರತದಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆಯಿರುವುದನ್ನು ಗಮನಿಸಿರುವ ಆಲಿಬಾಬಾ ಬೆಂಬಲಿತ ಪೇಟಿಎಂ, 1 ರು.ಗೂ ಚಿನ್ನ ಖರೀದಿ ಮಾಡಬಹುದಾದ ‘ಡಿಜಿಟಲ್ ಚಿನ್ನ’ ಮಾರಾಟ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಅದಕ್ಕಾಗಿ ಅದು ಚಿನ್ನ ಶುದ್ಧೀಕರಿಸುವ ಎಂಎಂಟಿಸಿ-ಪಿಎಎಂಪಿಯೊಂದಿಗೆ ಸಹಭಾಗಿತ್ವ ಪಡೆದಿದ್ದು, ಎಲೆಕ್ಟ್ರಾನಿಕ್ ವೇದಿಕೆ ಮೂಲಕ ಚಿನ್ನದ ಮೇಲೆ ಹೂಡಿಕೆಗೆ ಅಥವಾ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.

ನಿಮ್ಮಲ್ಲಿರುವ ಪೇಟಿಎಂ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿ 24ಕೆ 999.9 ಶುದ್ಧ ಚಿನ್ನವನ್ನು ಆನ್‌ಲೈನ್ ಮೂಲಕ ಖರೀದಿಸಿ, ಎಂಎಂಟಿಸಿ-ಪಿಎಎಂಪಿಯಲ್ಲಿ ಉಚಿತವಾಗಿ ಭದ್ರವಾಗಿ ಠೇವಣಿಯಿಡಬಹುದು. ವಿಶೇಷವೆಂದರೆ, ಈ ಮೂಲಕ ನೀವು ಚಿನ್ನದ ಮೇಲೆ 1ರಿಂದ ಹೂಡಿಕೆ ಆರಂಭಿಸಬಹುದು. ಅಗತ್ಯ ಬಿದ್ದಾಗ ಚಿನ್ನ ನಾಣ್ಯಗಳ ರೂಪದಲ್ಲಿ ಮನೆಗೇ ತರಿಸಿಕೊಳ್ಳಬಹುದು ಅಥವಾ ಆನ್‌ಲೈನ್ ಮೂಲಕವೇ ಎಂಎಂಟಿಸಿ-ಪಿಎಎಂಪಿಗೆ ಮರು ಮಾರಾಟ ಮಾಡಬಹುದು. ಮಾರಾಟ ಮಾಡಿದ ಚಿನ್ನದ ವೌಲ್ಯ ಬಳಕೆದಾರನ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.