ಚಿನ್ನ ಕೊಳ್ಳುವವರಿಗೆ ಇಲ್ಲಿದೆ ಭರ್ಜರಿ ಶುಭ ಸುದ್ದಿ. ಈ ಸಂದರ್ಭದಲ್ಲಿ ನೀವು  ಬಂಗಾರವನ್ನು ಕೊಳ್ಳಬೇಕೆಂದು ಬಯಸಿದ್ದರೆ ಹೆಚ್ಚಿನ ಅನುಕೂಲವನ್ನೆ ಪಡೆಯಬಹುದು. ಕಳೆದ 2 ದಿನಗಳ ಹಿಂದೆ ಇಳಿದಿದ್ದ ಬೆಲೆ ಇದೀಗ ಮತ್ತೊಮ್ಮೆ ಇಳಿಕೆಯಾಗಿದೆ. 

ನವದೆಹಲಿ : ಜಾಗತಿಕವಾಗಿ ಸದಾ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತದೆ. ಕಳೆದ 2 ದಿನಗಳ ಹಿಂದೆಯಷ್ಟೇ 5 ತಿಂಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಚಿನ್ನದ ದರ ಇದೀಗ ಮತ್ತೊಮ್ಮೆ ಇಳಿದಿದೆ. 

ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ ಶೇ. 0.45ರಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇದರಿಂದ 30,007 ರು. ಆದಂತಾಗಿದೆ. ಇದರಿಂದ ಚಿನ್ನ ಕೊಳ್ಳುವವರಿಗೆ ಶುಭ ಸುದ್ದಿ ದೊರಕಿದಂತಾಗಿದೆ.

ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯು ಕಡಿಮೆಯಾಗಿರುವುದೇ ಚಿನ್ನದ ಬೆಲೆ ಇಳಿಕೆಯಾಗಲು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.