ದೇವಸ್ಥಾನಕ್ಕೆ ಬಂದವರೆಲ್ಲಾ ದೇಗುಲದಿಂದ ಅನತಿ ದೂರದಲ್ಲೇ ಚಪ್ಪಲಿ ಕಳಚಿಟ್ಟು ಹೋಗ್ತಾರೆ.. ಹಾಗೇ ಚಪ್ಪಲಿ ಕಳಚಿದ ಮೇಲೆ ಕಾಲಿಗೆ ನೀರು ಹಾಕಿಕೊಂಡೇ ದರ್ಶನ ಪಡೆಯೋರು ಇದ್ದಾರೆ. ಆದ್ರಿಲ್ಲೊಂದು ದೇಗುಲ ಇದೆ. ಈ ದೇವಿಗೆ ಚಪ್ಪಲಿಯೇ ಸರ್ವ ಶ್ರೇಷ್ಠ, ಅಷ್ಟೇ ಅಲ್ಲ ಚಪ್ಲಿ ಜಾತ್ರೆಯೇ ನಡೆಯುತ್ತೆ.. ಯಾವುದು ಆ ದೇವಾಲಯ ಅಂತೀರಾ? ಇಲ್ಲಿದೆ ನೋಡಿ ವಿವರ
ಕಲಬುರ್ಗಿ(ಅ.27): ಗೋಳಾದ ಗ್ರಾಮ ದೇವತೆ ಲಕ್ಕಮ್ಮ, ಶಕ್ತಿ ದೇವತೆ ದೇವಿ ಬಳಿ ಬೇಡಿಕೊಂಡಿದ್ದೆಲ್ಲಾ ಈಡೇರುತ್ತಂತೆ ಹೀಗಾಗಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವಿ ಬಳಿ ಚಪ್ಪಲಿ ಕಟ್ಟೋ ಹರಕೆ ಹೊತ್ತಿರ್ತಾರೆ. ಇಷ್ಟಾರ್ಥ ಸಿದ್ಧಿಯಾದ ಬಳಿಕ ದೀಪಾವಳಿ ಕಡೆಯ ಪಂಚಮಿಯಂದು ನಡೆಯುವ ಜಾತ್ರೆಗೆ ಬಂದು ಚಪ್ಪಲಿ ಕಟ್ಟಿ ಹರಕೆ ತೀರಿಸುತ್ತಾರೆ.
ಜಗವೆಲ್ಲ ಸಂಚರಿಸೋ ದೇವಿ ಪಾದಕ್ಕೆ ಯಾವುದೇ ನೋವು ಬಾರದಿರಲಿ ಅನ್ನೋದೇ ಈ ಆಚರಣೆ ಹಿಂದಿನ ನಂಬಿಕೆಯಂತೆ. ಇನ್ನೂ ಎಲ್ಲಾ ದೇವರಿಗೆ ಎದುರಿನಿಂದ ಪೂಜೆ ಸಲ್ಲಿಸಿದರೆ, ಲಕ್ಕಮ್ಮ ದೇವಿಗೆ ಹಿಂಭಾಗದಿಂದ ಪೂಜೆ ಸಲ್ಲಿಸುವುದು ಇನ್ನೊಂದು ವಿಶೇಷ..
ಸೂರ್ಯೋದಯದಿಂದ ಸೂರ್ಯಾಸ್ತಕ್ಕೂ ಮುನ್ನವೇ ಜಾತ್ರೆ ಮುಗಿಯಬೇಕು ಅನ್ನೋದು ಇನ್ನೊಂದು ವಿಶೇಷ. ಒಟ್ಟಾರೆ ಹಲವು ವಿಶೇಷತೆಗಳ ಗೋಳಾ ಲಕ್ಕಮ್ಮ ಚಪ್ಪಲಿ ಜಾತ್ರೆ ನಿನ್ನೆಅದ್ದೂರಿಯಾಗಿ ನಡೆಯಿತು
