ಹಿಸ್ಸಾರ್ :  ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್ ಗೆ  ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ  ಜೀವಾವಧಿ ಶಿಕ್ಷೆ ವಿಧಿಸಿ ಹಿಸ್ಸಾರ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಅಲ್ಲದೇ ಅವರ 28 ಮಂದಿ ಅನುಯಾಯಿಗಳಿಗೂ ಕೂಡ 6 ಮಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ  ತೀರ್ಪನ್ನು ಪ್ರಕಟ ಮಾಡಲಾಗಿದೆ. ಸದ್ಯ ರಾಮ್ ಪಾಲ್ ನನ್ನು ಹಿಸಾರ್ ಸೆಂಟ್ರಲ್ ಜೈಲ್ 2ರಲ್ಲಿ ಇರಿಸಲಾಗಿದೆ. 

ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳದಲ್ಲಿ 1800ಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲದೇ  ಸೆಕ್ಷನ್ 144ನ್ನು ಕೂಡ ಜಾರಿ ಮಾಡಲಾಗಿತ್ತು.  

2008ರಲ್ಲಿ ರಾಮ್ ಪಾಲ್ ಬೆಂಬಲಿಗರು ರೋಹ್ಟಕ್ ಹಳ್ಳಿಗರ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಸಾವು ನೋವುಗಳು ಸಂಭವಿಸಿದ್ದವು.  ಕೊಲೆ ಪ್ರಕರಣ, ಕೊಲೆ ಯತ್ನ, ಗಲಭೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಸೇರಿದಂತೆ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ರಾಮ್ ಪಾಲ್ ನನ್ನು ಬಂಧಿಸಲಾಗಿತ್ತು.