ಸೂಪರ್’ಸ್ಟಾರ್ ರಜನೀಕಾಂತ್  8 ವರ್ಷಗಳ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಿ ಮಾತನಾಡಿದರು.

ಚೆನ್ನೈ (ಮೇ.15): ಸೂಪರ್’ಸ್ಟಾರ್ ರಜನೀಕಾಂತ್ 8 ವರ್ಷಗಳ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಿ ಮಾತನಾಡಿದರು.

ಇಲ್ಲಿನ ರಾಘವೇಂದ್ರ ವೆಡ್ಡಿಂಗ್ ಹಾಲ್’ನಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜಕೀಯ ಸೇರುತ್ತೀರಾ ಎನ್ನುವ ಪ್ರಸ್ತಾಪ ಬಂದಾಗ’ ನನಗೆ ರಾಜಕೀಯ ಸೇರುವ ಇರಾದೆಯಿಲ್ಲ. ದೇವರು ಇಚ್ಚಿಸಿದರೆ ಹಾಗೆಯೇ ಆಗಲಿ ಎಂದರು.

ನಮ್ಮ ಜೀವನದಲ್ಲಿ ಏನೇನು ಆಗಬೇಕೆಂಬುದನ್ನು ದೇವರು ನಿರ್ಧರಿಸುತ್ತಾನೆ. ಈಗ ನಾನು ನಟನಾಗಬೇಕೆಂದು ಅವನ ಇಚ್ಚೆಯಿತ್ತು. ಹಾಗಾಗಿ ನಾನು ನಟನಾಗಿದ್ದೇನೆ. ಹಾಗೆಯೇ ನಾನು ರಾಜಕೀಯಕ್ಕೆ ಪ್ರವೇಶಿಸಬೇಕು ಅನ್ನೋದು ಅವನಿಚ್ಚೆಯಾದರೆ ನಾನು ನಾಳೆಯೇ ರಾಜಕೀಯ ಪ್ರವೇಶಿಸುತ್ತೇನೆ. ಒಂದು ವೇಳೆ ರಾಜಕೀಯ ಸೇರಿದರೆ ಬಹಳ ಪ್ರಾಮಾಣಿಕನಾಗಿ ಕೆಲಸ ಮಾಡುತ್ತೇನೆ ಎಂದು ರಜನೀಕಾಂತ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಜಕೀಯ ಹೊರತಾಗಿ ತನ್ನ ಅಭಿಮಾನಿಗಳಿಗೆ ಕುಡಿಯುವುದನ್ನು, ಸಿಗರೇಟು ಸೇದುವುದನ್ನು ಬಿಟ್ಟು ನಿಮ್ಮ ನಿಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿ. ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಆಲ್ಕೋಹಾಲ್ ಸೇವನೆ ಕೇವಲ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ನಿಮ್ಮ ಯೋಚನೆ ಮತ್ತು ಕಾರ್ಯಶೈಲಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಸಲಹೆ ನೀಡಿದ್ದಾರೆ.