ಗೋವಾ ಇಂಧನ ಖಾತೆ ಸಚಿವ ಪಾಂಡುರಂಗ ಮಡಕೈಕರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. 

ಬೆಂಗಳೂರು [ಜೂ.05] : ಗೋವಾ ಇಂಧನ ಖಾತೆ ಸಚಿವ ಪಾಂಡುರಂಗ ಮಡಕೈಕರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸೋಮವಾರ ಮಡಕೈಕರ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

53 ವರ್ಷದ ಮಡಕೈಕರ್ ಅವರಿಗೆ ಸದ್ಯ ಇಲ್ಲಿನ ಕೋಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ. 

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಕೂಡ ಅನಾರೋಗ್ಯಕ್ಕೆ ಈಡಾಗಿದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.