Asianet Suvarna News Asianet Suvarna News

ಗೋವಾದಿಂದ ಕರ್ನಾಟಕದ ವಿರುದ್ಧ ಮತ್ತೊಂದು ಖ್ಯಾತೆ – ಮೀನಿನ ಮೇಲೂ ಕಡಿವಾಣ

ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮೀನಿನ ಲಭ್ಯತೆ ಇರುವಂತೆ ನೋಡಿಕೊಳ್ಳುವ ಸಲುವಾಗಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೆ  ಮೀನು ಸಾಗಣೆ ಮಾಡುವ ಟ್ರಕ್’ಗಳ ಮೇಲೆ ತೆರಿಗೆ ವಿಧಿಸಲು ಗೋವಾ ಸರ್ಕಾರ  ಉದ್ದೇಶಿಸಿದೆ.

Goa Mulls Levying on Trucks Carrying Fish to karnataka

ಪಣಜಿ(ನ.30): ಕನ್ನಡಿಗರ ಮೇಲೆ ಒಂದಿಲ್ಲೊಂದು ಕ್ರಮ ಜರುಗಿಸುತ್ತಿರುವ  ಗೋವಾ ಸರ್ಕಾರ ಈಗ ಕರ್ನಾಟಕಕ್ಕೆ ಪೂರೈಕೆಯಾಗುವ ಮೀನಿಗೂ ಕೂಡ ಕಡಿವಾಣ ಹಾಕಲು ಹೊರಟಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮೀನಿನ ಲಭ್ಯತೆ ಇರುವಂತೆ ನೋಡಿಕೊಳ್ಳುವ ಸಲುವಾಗಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೆ  ಮೀನು ಸಾಗಣೆ ಮಾಡುವ ಟ್ರಕ್’ಗಳ ಮೇಲೆ ತೆರಿಗೆ ವಿಧಿಸಲು ಗೋವಾ ಸರ್ಕಾರ  ಉದ್ದೇಶಿಸಿದೆ. ಇದರಿಂದಾಗಿ ಗೋವಾ ಅವಲಂಬಿತ ಕರ್ನಾಟಕದ ಮೀನು ಮಾರುಕಟ್ಟೆಯಲ್ಲಿ  ದರ ಏರಿಕೆಯಾಗುವ ಸಾಧ್ಯತೆ ಇದೆ.

ಗಡಿಯಲ್ಲಿ ಅನ್ಯ ರಾಜ್ಯಗಳಿಗೆ ತೆರಳುವ  ಮೀನು ಸಾಗಣೆ ಲಾರಿಗಳಿಗೆ ನಿರ್ದಿಷ್ಟ ಶುಲ್ಕ ವಿಧಿಸಲು ನಾವು ಗಂಭೀರವಾಗಿ ಚಿಂತನೆ ನಡೆಸಿದ್ದೇವೆ ಎಂದು ರಾಜ್ಯ ಮೀನುಗಾರಿಕೆ ಸಚಿವ ವಿನೋದ್ ಪಾಲಿನ್ಕರ್ ಹೇಳಿದ್ದಾರೆ.

ಗೋವಾದಿಂದ ಉತ್ತಮ ಗುಣಮಟ್ಟದ ಮೀನುಗಳ ರಫ್ತಿಗೆ ಕಡಿವಾಣ ಹಾಕುವ ಮೂಲಕ ಸ್ಥಳೀಯ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಮೀನುಗಳು ಲಭ್ಯವಾದುವಂತೆ ನೋಡಿಕೊಳ್ಳಲಾಗುವುದು ಎಂದು ಪಾಲಿನ್ಕರ್ ಹೇಳಿದ್ದಾರೆ.

Follow Us:
Download App:
  • android
  • ios