ಪಣಜಿ :  ‘ರಫೇಲ್‌ ವ್ಯವಹಾರದ ರಹಸ್ಯ ಕಡತ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್‌ ಅವರ ಮನೆಯ ಬೆಡ್‌ರೂಮಲ್ಲಿವೆ’ ಎಂಬ ಗೋವಾ ಸಚಿವ ವಿಶ್ವಜಿತ್‌ ರಾಣೆ ಧ್ವನಿಯುಳ್ಳ ಆಡಿಯೋ ಟೇಪ್‌ ಬಿಡುಗಡೆಯಾದ ಬೆನ್ನಲ್ಲೇ ಆರೋಗ್ಯ ಸಚಿವರಿಗೆ ಬೆದರಿಕೆ ಒಡ್ಡಲಾಗಿದೆ ಎಂದು AICC ಪ್ರಧಾನಿ ಕಾರ್ಯದರ್ಶಿ ಎ.ಚೆಲ್ಲಾ ಕುಮಾರ್ ಹೇಳಿದ್ದಾರೆ. 

ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆದರಿಕೆ ಒಡ್ಡಿದ್ದಾರೆ ಎಂದಿದ್ದಾರೆ. 

ರಾಣೆ ಅವರು 2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರು. ಸಚಿವರು ತಮ್ಮನ್ನು ಭೇಟಿಯಾಗಿ ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದಾರೆ. 

 ರಾಣೆ ಅನೇಕ ಬಾರಿ ತಮಗೆ ಕರೆ ಮಾಡುತ್ತಿದ್ದರು.  ಸಮಸ್ಯೆಯನ್ನೂ ಹೇಳಿಕೊಂಡಿದ್ದಾರೆ.  ಆಡಿಯೋ ಟೇಪ್ ವಿಚಾರವಾಗಿಯೇ ರಾಣೆಗೆ ಪ್ರಧಾನಿ ಹಾಗೂ ಅಮಿತ್ ಶಾ ಇಬ್ಬರೂ ಕೂಡ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಿದ್ದಾರೆ. 

ಆದರೆ ಈ ಸಂಬಂಧ ಪ್ರತಿಕ್ರಿಯಿಸಿದ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಕಾಂಗ್ರೆಸ್ ಮುಖಂಡ ಕುಮಾರ್ ಹೇಳಿಕೆ ರಬ್ಬಿಶ್ ಎಂದಿದ್ದಾರೆ.