ಮಹಾದಾಯಿ ವಿವಾದಕ್ಕೆ ಮತ್ತೆ ಹೊಸ ಕಿರಿಕ್ ಶುರುವಾಗಿದೆ. ವಿವಾದ ಬಗೆಹರಿಸುವ ಬಿಜೆಪಿ ಹೈಕಮಾಂಡ್ ಯತ್ನಕ್ಕೆ ಅಡ್ಡಿಯುಂಟಾಗಿದೆ.
ಬೆಂಗಳೂರು (ಡಿ.21): ಮಹಾದಾಯಿ ವಿವಾದಕ್ಕೆ ಮತ್ತೆ ಹೊಸ ಕಿರಿಕ್ ಶುರುವಾಗಿದೆ. ವಿವಾದ ಬಗೆಹರಿಸುವ ಬಿಜೆಪಿ ಹೈಕಮಾಂಡ್ ಯತ್ನಕ್ಕೆ ಅಡ್ಡಿಯುಂಟಾಗಿದೆ.
ಕರ್ನಾಟಕಕ್ಕೆ ನೀರು ನೀಡುವುದಕ್ಕೆ ಬಿಜೆಪಿ ಮಿತ್ರ ಪಕ್ಷ ಗೋವಾ ಫಾರ್ವರ್ಡ್ ಬ್ಲಾಕ್ ಆಕ್ಷೇಪ ವ್ಯಕ್ತಪಡಿಸುತ್ತದೆ. ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಂಧಾನ ಸಭೆಗೆ ಆಕ್ಷೇಪಿಸಿದೆ.
ಗೋವಾ ಅಸ್ಮಿತೆಗೆ ವಿರೋಧವಾದ ತಿರ್ಮಾನ ತೆಗೆದುಕೊಳ್ಳದಂತೆ ಒತ್ತಡ ಸಿಎಂ ಮನೋಹರ ಪರಿಕ್ಕರ್ ಮೇಲೆ ಒತ್ತಡ ಹಾಕಿದೆ. ಮಿತ್ರಪಕ್ಷದ ಒತ್ತಡದಿಂದ ಸಿಎಂ ಮನೋಹರ್ ಪರಿಕ್ಕರ್ ಗೊಂದಲಕ್ಕೀಡಾಗಿದ್ದಾರೆ.
2002 ರಲ್ಲಿ ಬಿಜೆಪಿ ಹೊಂದಿದ್ದ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ರಾಜ್ಯದ ಹಿತವನ್ನು ಬಲಿಕೊಡುವ ತಿರ್ಮಾನ ತೆಗೆದುಕೊಳ್ಳಬೇಡಿ. ರಾಜಕೀಯ ತಿರ್ಮಾನಕ್ಕೆ ಮುನ್ನ ಎಲ್ಲರ ಸಲಹೆ ಪಡೆದು ಮುಂದುವರಿಯುವಂತೆ ಗೋವಾ ಫಾರ್ವರ್ಡ್ ಬ್ಲಾಕ್ ಒತ್ತಾಯಿಸಿದೆ.
