ಪಣಜಿ(ಡಿ.08): ಗೋವಾ ಮುಖ್ಯಮಂತ್ರಿ ಮನೋಈಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿಯ ವರದಿಯನ್ನು ಬಹಿರಂಗಪಡಿಸಲು ಗೋವಾ ರಾಜ್ಯ ಸರ್ಕಾರ ನಿರಾಕರಿಸಿದೆ. 

ಗೋವಾ ಹೈಕೋರ್ಟ್ ರಾಜ್ಯದ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಲು ಕೇಳಿದ್ದು ಇದಕ್ಕೆ ಸರ್ಕಾರ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲೇಖಿಸಿ ನಿರಾಕರಿಸಿದೆ.

ಗೋವಾ ರಾಜ್ಯ ಕಾರ್ಯದರ್ಶಿ  ಧರ್ಮೇಂದ್ರ ಶರ್ಮಾ ಇಂದು ಗೋವಾ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಆರ್.ಎಂ. ಬೋರ್ಡೇ ಅವರೆದುರು ರಾಜ್ಯ ಸರ್ಕಾರದ ಪರ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಸಾರ್ವಜನಿಕ ಕಚೇರಿಗೆ ಸಂಬಂಧಿಸಿರದ ಯಾವುದೇ ವ್ಯಕ್ತಿ ತನ್ನ ಆರೋಗ್ಯ ಸಮಸ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ ಇರುವ ಹಕ್ಕನ್ನು ಹೊಂದಿದ್ದಾನೆ.ಇನ್ನು ಮುಖ್ಯಮಂತ್ರಿಯಾಗಿರುವ ಓರ್ವ ವ್ಯಕ್ತಿಯ ಆರೋಗ್ಯ ಸಮಸ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕೂಡ ಆರ್ಟಿಕಲ್ 21ರ ಅಡಿಯಲ್ಲಿ ಗೌಪ್ಯತೆ ಹಕ್ಕಿನ ಉಲ್ಲಂಘನೆಯಾಗಲಿದೆ. ಎಂದು ಸರ್ಕಾರ ವಾದಿಸಿದೆ.

ಮುಖ್ಯಮಂತ್ರಿಗಳ ಆರೋಗ್ಯದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿರುವ ಡಿಮೆಲ್ಲೋ ಮುಖ್ಯಮಂತ್ರಿಗಳ ಅನಾರೋಗ್ಯದ ಕಾರಣ ಗೋವಾದಲ್ಲಿ ಆಡಳಿತ ಯಂತ್ರ ಕುಸಿಯುತ್ತಿದೆ ಎಂದು ಉಲ್ಲೇಖಿಸಿದ್ದರು.