ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಬಿಜೆಪಿಯಲ್ಲೇ ಕೂಗು ಕೇಳಿ ಬರುತ್ತಿದೆ.

ಪಣಜಿ: ಮುಖ್ಯಮಂತ್ರಿ ಮನೋಹರ ಪರ್ರಿಕರ್ ಅವರು ಪುನಃ ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರು ಪದತ್ಯಾಗ ಮಾಡಬೇಕೆಂಬ ಕೂಗು ಗೋವಾ ಬಿಜೆಪಿಯಲ್ಲಿ ಎದ್ದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಆಡಳಿತ ಹಾಗೂ ಅವರ ವೈಯಕ್ತಿಕ ಹಿತದೃಷ್ಟಿಯಿಂದ ಪರ್ರಿಕರ್ ಅಧಿಕಾರ ಬಿಟ್ಟು ಕೊಡುವತ್ತ ಆಲೋಚಿಸಬೇಕು. ಆದರೆ ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು. ಈ ಬಗ್ಗೆ ಬಿಜೆಪಿ ನಾಯಕತ್ವದೊಂದಿಗೆ ಸಮಾ ಲೋಚಿಸುತ್ತೇನೆ’ ಎಂದು ಕೇಂದ್ರ ಸಚಿವ ಶ್ರೀಪಾದ ನಾಯಕ್ ಹೇಳಿದ್ದಾರೆ. 

ಅಲ್ಲದೆ, ‘ಬಿಜೆಪಿ ವರಿಷ್ಠರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದೂ ನಾಯಕ್ ತಿಳಿಸಿದ್ದಾರೆ. ಆದರೆ ನಾಯಕ್ ಹೇಳಿಕೆಯನ್ನು ಗೋವಾ ಸಿಎಂ ಕಚೇರಿ ನಿರಾಕರಿಸಿದೆ.