ಅನಾರೋಗ್ಯ : ಅಮೆರಿಕಾಗೆ ಗೋವಾ ಸಿಎಂ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 11:06 AM IST
Goa CM to fly to US for check up
Highlights

ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕರ್ ಶುಕ್ರವಾರ ಅಮೆರಿಕಾಗೆ ತೆರಳುತ್ತಿದ್ದಾರೆ.

ಪಣಜಿ: ಅನಾರೋಗ್ಯದ ಹಿನ್ನೆಲೆ ಗೋವಾ ಸಿಎಂ ಮನೋಹರ ಪಾರಿಕರ್ ಅವರು ಚಿಕಿತ್ಸೆಗಾಗಿ ಶುಕ್ರವಾರ ಮತ್ತೆ ಅಮೆರಿಕಕ್ಕೆ ತೆರಳಲಿದ್ದಾರೆ. ಎಲ್ಲ ವೈದ್ಯಕೀಯ ಪರೀಕ್ಷೆಮುಗಿಸಿ, ಅವರು ಆ. 17 ಕ್ಕೆ ವಾಪಸ್ ಆಗಲಿದ್ದಾರೆ. 

ಹೀಗಾಗಿ ಆ. 10ರಿಂದ ಆ.17ರವರೆಗೂ ಮುಖ್ಯಮಂತ್ರಿ ಪರ್ರಿಕರ್ ಅವರು ರಾಜ್ಯದಲ್ಲಿ ಅಲಭ್ಯವಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿದೆ. 

ಮೇದೋಜೀರಕಾಂಗ ಸಮಸ್ಯೆ ಯಿಂದ ಬಳಲುತ್ತಿದ್ದ ಪರ್ರಿಕರ್ ಅವರು ಇದೇ ವರ್ಷದ ಮಾರ್ಚ್ 7 ರಂದು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಅಗತ್ಯ ಚಿಕಿತ್ಸೆ ಮುಗಿಸಿಕೊಂಡು ಜೂ. 14ಕ್ಕೆ ವಾಪಸ್ ಆಗಿದ್ದರು.

loader