ಪಣಜಿ(ಮಾ.20): ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ನೂತನ ಗೋವಾ ಸಿಎಂ ಪ್ರಮೋದ್ ಸಾವಂತ್ ಗೆಲುವು ಸಾಧಿಸಿದ್ದಾರೆ.

ಗೋವಾ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸ ಮತದಲ್ಲಿ, ಪ್ರಮೋದ್ ಸಾವಂತ್ ಸರ್ಕಾರಕ್ಕೆ 20 ಶಾಸಕರು ಬೆಂಬಲ ಘೋಷಣೆ ಮಾಡಿದ್ದಾರೆ. ಈ ಮೂಲಕ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ.

ಬಿಜೆಪಿ ನೇತೃತ್ವ ಮೈತ್ರಿಕೂಟಕ್ಕೆ ಒಟ್ಟು 20 ಶಾಸಕರು ಬೆಂಬಲ ನೀಡಿದ್ದು, ಬಿಜೆಪಿಯ 11, ಮಿತ್ರಪಕ್ಷಗಳಾದ ಜಿಎಫ್ ಪಿ, ಎಂಜಿಪಿಯ ತಲಾ ಮೂರು ಶಾಸಕರು ಮತ್ತು 3 ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 

ಇನ್ನು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಶಾಸಕ ಪಾಂಡುರಂಗ ಮಡ್ಕೈಕರ್ ವಿಶ್ವಾಸಮತ ಯಾಚನೆಗೆ ಗೈರಾಗಿದ್ದರು. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಇದೀಗ 36 ಮಂದಿ ಶಾಸಕರಿದ್ದಾರೆ.