Asianet Suvarna News Asianet Suvarna News

ಸಿಎಂ ಪರ್ರಿಕರ್ ರಾಜೀನಾಮೆಗೆ ಮಿತ್ರಪಕ್ಷದಿಂದಲೇ ಒತ್ತಾಯ..!

ಪಕ್ಷದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿಎಂ ಅಸ್ವಾಸ್ಥ್ಯದಿಂದ ಆಡಳಿತ ಯಂತ್ರಕ್ಕೆ ಹಾನಿಯಾಗಿದೆ. ಹೀಗಾಗಿ ಆಡಳಿತ ಯಂತ್ರ ಸುಲಲಿತವಾಗಿ ಸಾಗಲು ಸಿಎಂ ಬದಲಾವಣೆ ಮಾಡಲೇಬೇಕು’ ಎಂದು ಆಗ್ರಹಿಸಿದರು.

Goa CM Manohar Parrikar should hand over charge administration paralysed says BJP ally
Author
Panaji, First Published Nov 18, 2018, 1:41 PM IST

ಪಣಜಿ(ನ.18): ಕುಂಟುತ್ತ ಸಾಗುತ್ತಿರುವ ಗೋವಾದಲ್ಲಿನ ಬಿಜೆಪಿ ಸರ್ಕಾರದಲ್ಲಿ ಪುನಃ ಒಡಕು ಸೃಷ್ಟಿಯಾಗಿದೆ. ‘ಅಸ್ವಾಸ್ಥ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ ಪರ್ರಿಕರ್ ರಾಜೀನಾಮೆ ನೀಡಬೇಕು. ಇಲ್ಲದೇ ಹೋದರೆ ಮುಂಬರುವ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆಯ 2 ಉಪಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ನಮ್ಮ ಪಕ್ಷ ಕಣಕ್ಕಿಳಿಯಲಿದೆ’ ಎಂದು ಸರ್ಕಾರದ ಪಾಲುದಾರ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ನಾಯಕ ದೀಪಕ್ ಧಾವಳೀಕರ್ ಎಚ್ಚರಿಸಿದ್ದಾರೆ.

ಇದೇ ವೇಳೆ ಸಿಎಂ ಹುದ್ದೆಯನ್ನು ತಮ್ಮ ಸೋದರ ಸುದಿನ್ ಧಾವಳೀಕರ್‌ಗೆ ಬಿಟ್ಟುಕೊಡಬೇಕು ಎಂದೂ ಆಗ್ರಹಿಸಿದ್ದಾರೆ. ಪಕ್ಷದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿಎಂ ಅಸ್ವಾಸ್ಥ್ಯದಿಂದ ಆಡಳಿತ ಯಂತ್ರಕ್ಕೆ ಹಾನಿಯಾಗಿದೆ. ಹೀಗಾಗಿ ಆಡಳಿತ ಯಂತ್ರ ಸುಲಲಿತವಾಗಿ ಸಾಗಲು ಸಿಎಂ ಬದಲಾವಣೆ ಮಾಡಲೇಬೇಕು’ ಎಂದು ಆಗ್ರಹಿಸಿದರು. ಒಂದು ವೇಳೆ ಪರ್ರಿಕರ್ ಬದಲಾವಣೆ ಮಾಡದೇ ಹೋದರೆ ಲೋಕಸಭೆ ಹಾಗೂ ಉಪಚುನಾವಣೆಗಳಲ್ಲಿ ಪಕ್ಷವು ಬಿಜೆಪಿ ವಿರುದ್ಧವೇ ಸ್ಪರ್ಧಿಸಲಿದೆ ಎಂದರು.

ಪರ್ರಿಕರ್ ಮೇದೋಜೀರಕ ಕ್ಯಾನ್ಸರ್’ಗೆ ತುತ್ತಾಗಿದ್ದು ದೆಹಲಿಯ ಏಮ್ಸ್’ನಲ್ಲಿ ಚಿಕಿತ್ಸೆ ಪಡೆದು ಗೋವಾಗೆ ಮರಳಿದ್ದಾರೆ. ಅಕ್ಟೋಬರ್ 14ರಂದು ಗೋವಾದ ತಮ್ಮ ಖಾಸಗಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು ಇದುವರೆಗೂ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ

Follow Us:
Download App:
  • android
  • ios