ಗೋವಾ ಮುಖ್ಯಮಂತ್ರಿಗೆ ಇತ್ತೀಚೆಗೆ ಕಾಡುತ್ತಿದೆಯಂತೆ ಭಯ..!

Goa CM Fear About Scooter
Highlights

ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸ್ಕೂಟರ್ ಮೇಲೆ ಓಡಾಡುವುದನ್ನು ಆಗಾಗ ಟೀವಿಯಲ್ಲಿ ನೋಡುತ್ತಿರುತ್ತೇವೆ. ಆದರೆ, ಅವರೀಗ ಸ್ಕೂಟರ್ ಮೇಲೆ ಓಡಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸ್ಕೂಟರ್ ಮೇಲೆ ಓಡಾಡುವುದನ್ನು ಆಗಾಗ ಟೀವಿಯಲ್ಲಿ ನೋಡುತ್ತಿರುತ್ತೇವೆ. ಆದರೆ, ಅವರೀಗ ಸ್ಕೂಟರ್ ಮೇಲೆ ಓಡಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದಕ್ಕೆ ಕಾರಣ ತಾವು ಸ್ಕೂಟರ್ ಓಡಿಸುವಾಗ ಎಲ್ಲಿ ಅಪಘಾತ ಸಂಭವಿಸುತ್ತೋ ಎಂಬ ಭಯ ಪರ್ರಿಕರ್ ಅವರನ್ನು ಕಾಡುತ್ತಿದೆ ಯಂತೆ.

 ಕಾಣಕೋಣ್’ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮನೋಹರ್ ಪರ್ರಿಕರ್, ‘ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ. ಸ್ಕೂಟರ್ ಓಡಿಸುವಾಗ ನಾನು ಕೆಲಸಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೇ ಯೋಚಿಸುತ್ತಿದ್ದರೆ, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸ್ಕೂಟರ್ ಓಡಿಸುವುದನ್ನು ನಿಲ್ಲಿಸಿದ್ದೇನೆ’ ಎಂದು ಹೇಳಿದ್ದಾರೆ.

loader