ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಗಾಂಧಿ, ‘ಹೌದು. ನನ್ನನ್ನು ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿಸ ಲಾಗಿದೆ. ಆದರೆ ಈ ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ' ಎಂದಿದ್ದಾರೆ.

ನವದೆಹಲಿ: ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ, ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಪ್ರತಿಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆಸುತ್ತಿವೆ ಎಂಬ ಮಾಹಿತಿ ಇತ್ತೀಚೆಗೆ ಲಭಿಸಿತ್ತು. ಇದನ್ನು ಖುದ್ದು ಗಾಂಧಿ ಅವರು ದೃಢಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಗಾಂಧಿ, ‘ಹೌದು. ನನ್ನನ್ನು ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿಸ ಲಾಗಿದೆ. ಆದರೆ ಈ ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ' ಎಂದಿದ್ದಾರೆ.
ಗೋಪಾಲಕೃಷ್ಣ ಗಾಂಧಿ ಅವರ ಜೊತೆ ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅವರ ಹೆಸರೂ ಪರಿಶೀಲನೆಯಲ್ಲಿದೆ. ಆದರೆ ಕೆಲವು ವಿಪಕ್ಷಗಳಿಗೆ ಕಾಂಗ್ರೆಸ್‌ ಸೂಚಿಸಿದ ಅಭ್ಯರ್ಥಿಯ ಹೆಸರು ಇಷ್ಟವಿಲ್ಲವಂತೆ. ಹೀಗಾಗಿ ಇನ್ನೂ ಒಮ್ಮತಕ್ಕೆ ಬರಲಾಗಿಲ್ಲ.

ಮೂಲಗಳ ಪ್ರಕಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರು ಗಾಂಧಿ ಜೊತೆ ಮಾತನಾಡಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೂ ಗೋಪಾಲಕೃಷ್ಣ ಇಷ್ಟವಂತೆ.