ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟ ಸರ್ಕಾರದಿಂದ ಟಿಡಿಪಿ ಹೊರ ನಡೆದ ಬೆನ್ನಲ್ಲೇ, ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟ ಸರ್ಕಾರದಿಂದ ಟಿಡಿಪಿ ಹೊರ ನಡೆದ ಬೆನ್ನಲ್ಲೇ, ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

ಗೋರ್ಖಾಗಳ ನಂಬಿಕೆಗೆ ಬಿಜೆಪಿ ದ್ರೋಹ ಮಾಡಿದೆ ಎಂದು ಆಪಾದಿಸಿ ಶನಿವಾರ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆದಿದೆ.

ಬಿಜೆಪಿ ನಾಯಕತ್ವದ ಎನ್‌ಡಿಎ ಜೊತೆ ತಮ್ಮ ಪಕ್ಷ ಯಾವುದೇ ಸಂಬಂಧ ಹೊಂದಿಲ್ಲ ಎಂದು ಜಿಜೆಎಂ ಸಂಘಟನಾ ಮುಖ್ಯಸ್ಥ ಎಲ್‌.ಎಂ. ಲಾಮಾ ಹೇಳಿದ್ದಾರೆ.

2009ರಲ್ಲಿ ಬಿಜೆಪಿ ನಾಯಕ ಜಸ್ವಂತ್‌ ಸಿಂಗ್‌ ಡಾರ್ಜಿಲಿಂಗ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಜಿಜೆಎಂ ಬೆಂಬಲಿಸಿತ್ತು.

2014ರಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎಸ್‌. ಅಹ್ಲುವಾಲಿಯಾರನ್ನು ಬಿಮಲ್‌ ಗುರಂಗ್‌ ನೇತೃತ್ವದ ಜಿಜೆಎಂ ಬೆಂಬಲಿಸಿತ್ತು. ಆದರೆ, ಪಕ್ಷದ ಹೊಸ ಮುಖ್ಯಸ್ಥ ಬಿನಯ್‌ ತಮಾಂಗ್‌, ಈಗ ಮೈತ್ರಿಕೂಟದಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ.