ತಮ್ಮ ಪಕ್ಷ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ. ಹಣದ ಸಮಸ್ಯೆ ನೀಗಿಸಿಕೊಳ್ಳಲು ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ. ತಮ್ಮ ಜೊತೆ ಸೆಲ್ಪೀ ತೆಗೆದುಕೊಳ್ಳಲು ಚಾರ್ಚ್ ಮಾಡುತ್ತಿದ್ದಾರೆ. 

ಚೆನ್ನೈ [ಆ.09]: ‘ಕನಿಷ್ಠ 100 ರು. ದೇಣಿಗೆ ನೀಡಿ, ವೈಕೋ ಜೊತೆ ಸೆಲ್ಫಿ ಪಡೆಯಿರಿ’! ಇದೇನಿದು ಸೆಲ್ಫಿಗೆ 100 ರು. ಕೊಡಬೇಕಾ ಎಂದು ಹುಬ್ಬೇರಿಸಬೇಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್ಥಿಕವಾಗಿ ಸಂಕಷ್ಟಎದುರಿಸುತ್ತಿರುವ ತಮಿಳುನಾಡಿನ ಪ್ರಾದೇಶಿಕ ಪಕ್ಷ ಎಂಡಿಎಂಕೆ ನಿಧಿ ಸಂಗ್ರಹಕ್ಕಾಗಿ ಅನುಸರಿಸುತ್ತಿರುವ ಅಭಿಯಾನ. 

ಕಾಶ್ಮೀರ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ಬಳಿಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಎಂಡಿಎಂಕೆ ಸಂಸ್ಥಾಪಕ ವೈಕೋ ಅವರನ್ನೇ ಬ್ರಾಂಡ್‌ ಮಾಡಿಕೊಂಡು ಪಕ್ಷದ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದೆ. 

ಸಂಸದ ವೈಕೋ ಅವರು ಎಂಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಾಲುಗಳಿಗೆ ಹಣ ಹಾಕಿ ದುಂದುವೆಚ್ಚ ಮಾಡುವ ಬದಲು ಪಕ್ಷಕ್ಕೆ ದೇಣಿಗೆ ನೀಡಿ ಎಂಬ ಘೋಷಣೆಯೊಂದಿಗೆ ಅಭಿಯಾನ ಕೈಗೊಂಡಿದೆ. ಈಗಾಗಲೇ ಪಕ್ಷದ ಕಾರ್ಯಕರ್ತರಿಗೆ ಸೂಚನೆಯನ್ನೂ ನೀಡಿದೆ.