ಐಎಎಸ್ ಅಧಿಕಾರಿಗಳು ತಮ್ಮ ಆಸ್ತಿಯ ವಿವರಗಳನ್ನು ಮುಂದಿನ ತಿಂಗಳ ಒಳಗಾಗಿ ಸಲ್ಲಿಸಬೇಕು. ಒಂದು ವೇಳೆ ಆಸ್ತಿ ವಿವರ ಸಲ್ಲಿಸಲು ವಿಫಲರಾದರೆ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನವದೆಹಲಿ(ಡಿ.27): ಐಎಎಸ್ ಅಧಿಕಾರಿಗಳು ತಮ್ಮ ಆಸ್ತಿಯ ವಿವರಗಳನ್ನು ಮುಂದಿನ ತಿಂಗಳ ಒಳಗಾಗಿ ಸಲ್ಲಿಸಬೇಕು. ಒಂದು ವೇಳೆ ಆಸ್ತಿ ವಿವರ ಸಲ್ಲಿಸಲು ವಿಫಲರಾದರೆ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 ಐಎಎಸ್ ಅಧಿಕಾರಿಗಳು 2018ರ ಜ.31ರ ಒಳಗಾಗಿ ಸ್ಥಿರಾಸ್ತಿ ವಿವರಗಳನ್ನು ಸಲ್ಲಿಸಬೇಕು. ಒಂದು ವೇಳೆ ಸಮಯಕ್ಕೆ ಸರಿಯಾಗಿ ಐಪಿಆರ್ (ಸ್ಥಿರಾಸ್ತಿ ವಿವರ)ಗಳನ್ನು ಸಲ್ಲಿಸಲು ಸಾಧವಾಗದೇ ಇದ್ದರೆ ಅಂಥವರ ಬಡ್ತಿ ಮತ್ತು ವಿದೇಶ ಪ್ರವಾಸಕ್ಕೆ ಅಗತ್ಯವಾಗಿರುವ ವಿಚಕ್ಷಣಾ ಪರವಾನಗಿಯನ್ನು ತಡೆಹಿಡಿಯಲಾಗುವುದು ಎಂದು ಹೆಚ್ಚುಚರಿ ಕಾರ್ಯದರ್ಶಿ ಪಿ.ಕೆ. ತ್ರಿಪಾಠಿ ತಿಳಿಸಿದ್ದಾರೆ.