ನವದೆಹಲಿ[ಮೇ.08]: ತಮ್ಮ ಒಡೆತನದ ಸಂಸ್ಥೆ ಆಯೋಜಿಸಿರುವ ಟೆನಿಸ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ವಿದೇಶಗಳಿಗೆ ತೆರಳಲು ಅನುಮತಿ ಕೋರಿದ್ದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿಗೆ ಸುಪ್ರೀಂಕೋರ್ಟ್‌ ಷರತ್ತಿನ ಅನುಮತಿ ನೀಡಿದೆ.

ಮೊದಲು 10 ಕೋಟಿ ರು. ಠೇವಣಿ ಇಟ್ಟು ಬಳಿಕ ವಿದೇಶಕ್ಕೆ ತೆರಳಿ ಎಂದು ಕಾರ್ತಿಗೆ ಸೂಚಿಸಿದೆ. ಅಲ್ಲದೆ ಈ ಮೊತ್ತ ನಿಮಗೇನು ದೊಡ್ಡದಲ್ಲ ಬಿಡಿ ಎಂದೂ ವ್ಯಂಗ್ಯವಾಡಿದೆ.

ಈ ಹಿಂದೆ ಕೂಡಾ ವಿದೇಶಕ್ಕೆ ತೆರಳಲು ಅನುಮತಿ ಕೋರಿದಾಗಲೂ ಕೋರ್ಟ್ 10 ಕೋಟಿ ರು. ಠೇವಣಿ ಇಡಲು ಸೂಚಿಸಿತ್ತು. ಐಎನ್‌ಎಕ್ಸ್‌ ಮೀಡಿಯಾ ಕೇಸಲ್ಲಿ ಕಾರ್ತಿ ಆರೋಪಿಯಾಗಿರುವ ಕಾರಣ, ಅವರು ಕೋರ್ಟ್‌ ಅನುಮತಿ ಇಲ್ಲದೇ ವಿದೇಶಕ್ಕೆ ತೆರಳುವಂತಿಲ್ಲ.