ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ನವಲಗುಂದ ತಾಲೂಕಿನ ಅರೆಕುರಹಟ್ಟಿ ಗ್ರಾಮದ ನಾಲ್ವರು ಬಾಲಕಿಯರು, ರಾತ್ರಿ ಮನೆಗೆ ಫೋನ್ ಮಾಡಿದ್ದ ತಮ್ಮನ್ನು ವ್ಯಕ್ತಿಯೊಬ್ಬ ಅಪಹರಿಸಿರುವುದಾಗಿ ಹೇಳಿದ್ದರು. ಬಳಿಕ ಗೋವಾದಲ್ಲಿ ತಮ್ಮನ್ನು ಬಿಟ್ಟು ಹೋಗಿರುವುದಾಗಿ ಹೇಳಿದ್ದರು ಮನೆಯವರಿಗೆ ಹೇಳಿದ್ದರು.

ಧಾರವಾಡ (ಅ.08): ಮನೆ ಬಿಟ್ಟು ಹೋಗಿದ್ದ ಧಾರವಾಡದ ನಾಲ್ವರು ಬಾಲಕಿಯರು ಗೋವಾದಲ್ಲಿ ಪತ್ತೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ನವಲಗುಂದ ತಾಲೂಕಿನ ಅರೆಕುರಹಟ್ಟಿ ಗ್ರಾಮದ ನಾಲ್ವರು ಬಾಲಕಿಯರು, ರಾತ್ರಿ ಮನೆಗೆ ಫೋನ್ ಮಾಡಿದ್ದ ತಮ್ಮನ್ನು ವ್ಯಕ್ತಿಯೊಬ್ಬ ಅಪಹರಿಸಿರುವುದಾಗಿ ಹೇಳಿದ್ದರು. ಬಳಿಕ ಗೋವಾದಲ್ಲಿ ತಮ್ಮನ್ನು ಬಿಟ್ಟು ಹೋಗಿರುವುದಾಗಿ ಹೇಳಿದ್ದರು ಮನೆಯವರಿಗೆ ಹೇಳಿದ್ದರು.

ತಕ್ಷಣ ಗೋವಾಕ್ಕೆ ತೆರಳಿದ ನವಲಗುಂದ ಪೊಲೀಸರು ಬಾಲಕಿಯರನ್ನು ಕರೆ ತಂದಿದ್ದಾರೆ. ವಿಚಾರಣೆಯ ಬಳಿಕ ಬಾಲಕಿಯರು ಅಪಹರಣದ ಸುಳ್ಳು ನಾಟಕವಾಡಿದ್ದರೆಂದು ತಿಳಿದುಬಂದಿದೆ. ಮನೆಯಲ್ಲಿ ಪೋಷಕರು ಬಯ್ಯುತ್ತಾರೆ ಎಂದು ಮನೆ ಬಿಟ್ಟು ಹೋಗಿದ್ದಾಗಿಯೂ ಬಾಲಕಿಯರು ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)