ಅಕ್ಕನ ಲವ್ ಪ್ರಪೋಸಲ್ ಕ್ಷಣ ಸೆರೆಹಿಡಿಯಲು ಈ ತಂಗಿ ಮಾಡಿದ ಕೆಲಸ..ಅಬ್ಬಬ್ಬಾ!
ಸೋಶಿಯಲ್ ಮೀಡಿಯಾ ಮನ ಗೆದ್ದ ಪೊದೆ ತಂಗಿ/ ಅಕ್ಕನ ಎಂಗೇಜ್ ಕ್ಷಣ ಸೆರೆ ಹಿಡಿಯಲು ತಂಗಿಯ ಸಾಹಸ/ ಪೊದೆ ಡ್ರೆಸ್ ಧರಿಸಿ ಕಾದು ಕುಳಿತಳು
ಈಕೆ ಪಕ್ಕಾ ಒಂದು ಪೊದೆಯಂತೆ ವೇಷ ಧರಿಸಿಕೊಂಡಿದ್ದಳು. ತನ್ನ ಅಕ್ಕನ ಎಂಗೆಂಜ್ ಮೆಂಟ್ ದೃಶ್ಯ ರಹಸ್ಯವಾಗಿ ಸೆರೆಹಿಡಿಯಲು ಪೊದೆಯ ರೀತಿ ವೇಷ ಧರಿಸಿ ಕಾಯುತ್ತ ಕುಳಿತಿದ್ದಳು.
ಈ ವಾರಾಂತ್ಯಕ್ಕೆ ನನ್ನ ಅಕ್ಕ ಎಂಗೇಜ್ ಆದರು. ಎಂಗೇಜ್ ಆಗುವ ಆ ಕ್ಷಣ ಸೆರೆ ಹಿಡಿಯಬೇಕು ಎಂದು ನಾನು ಪೊದೆ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿದ್ದೆ ಎಂದು ಸೋಶಿಯಲ್ ಮೀಡಿಯಾ ಮುಖೇನ ಅಭಿಪ್ರಾಯ ಹಂಚಿಕೊಂಡಿದ್ದಾಳೆ.
ಹಳೆ ಲವರ್ ನೆನಪುಗಳಿಂದ ಹೊರಬರೋಕೆ ಇಲ್ಲಿದೆ ಸುಲಭ ಟ್ರಿಕ್ಸ್!...
23 ವರ್ಷದ ಥೆರೆಸೆ ಮಾರ್ಕೆಲ್ ಮತ್ತು ರಾಖೆಲ್ ಅಕ್ಕತಂಗಿ. ಅಕ್ಕ ರಿಖೆಲ್ ಬಾಯ್ ಪ್ರೇಂಡ್ ಫಿಲಿಬೆಕ್ ಮತ್ತು ತಂಗಿ ಥೆರೆಸೆ ಮಾರ್ಕೆಲ್ ಸೇರಿಯೋ ಪ್ಲಾನ್ ಸಿದ್ಧ ಮಾಡುತ್ತಾರೆ. ನಾನು ಈ ದಿನ ನಿನ್ನ ಅಕ್ಕನಿಗೆ ಪ್ರಪೋಸ್ ಮಾಡುವವನಿದ್ದು ಆ ಕ್ಷಣಗಳನ್ನು ಸೆರೆ ಹಿಡಿಯಬೇಕು ಎಂದು ಹೇಳಿರುತ್ತಾನೆ.
ಇದೇ ಜಕಾರಣಕ್ಕೆ ಪೊದೆ ಹೋಲುವ ಡ್ರೆಸ್ ಸಹ ತರಿಸಿದ್ದಾರೆ. ಅಕ್ಕನಿಗೆ ಪ್ರಪೋಸ್ ಮಾಡುವ ಮುನ್ನ ಆ ಜಾಗದಲ್ಲಿ ತಂಗಿ ಪೊದೆಯಾಕಾರದ ಡ್ರೆಸ್ ಧರಿಸಿ ಕಾದು ಕುಳಿತಿದ್ದಳು. ಅಕ್ಕನಿಗೆ ಪ್ರಪೋಸ್ ಮಾಡಿದ ನಂತರ ಆಕೆ ಯೆಸ್ ಹೇಳುವವರೆಗೂ ಕಾದಿದ್ದು ಆ ಕ್ಷಣಗಳನ್ನು ಕ್ಯಾಚ್ ಮಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇವರದ್ದೇ ಸುದ್ದಿ.