Asianet Suvarna News Asianet Suvarna News

ಮೈಮೇಲೆ ದೆವ್ವ ಬರುತ್ತೆ ಎಂದ ನಾಟಿ ವೈದ್ಯ: ಚಿಕಿತ್ಸೆಗೆ ಹೋದ ಮಹಿಳೆ ಶವವಾಗಿ ವಾಪಸ್

ಆಕೆಗೆ ಬಿಪಿ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಳು. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಈಕೆಗೆ ಸರಿ ಹೋಗಿರಲಿಲ್ಲಾ ಹಾಗಾಗ ಮೈಮೇಲೆ ದೆವ್ವ ಗಾಳಿ ರೀತಿ ಬರುತ್ತೆ ಅಂತಾ ಹೇಳುತ್ತಿದ್ದರು, ದೆವ್ವ  ಗಾಳಿ ಬಿಡಿಸಬೇಕು ಅಂತಾ ನಾಟಿ ವೈದ್ಯನ ಬಳಿ ಹೋದ ಆಕೆ ವಾಪಸ್ಸು ಬಂದಿದ್ದು ಮಾತ್ರ ಶವವಾಗಿ ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.

Girl Went For Treatment Died
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ(ಮೇ.22): ಆಕೆಗೆ ಬಿಪಿ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಳು. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಈಕೆಗೆ ಸರಿ ಹೋಗಿರಲಿಲ್ಲಾ ಹಾಗಾಗ ಮೈಮೇಲೆ ದೆವ್ವ ಗಾಳಿ ರೀತಿ ಬರುತ್ತೆ ಅಂತಾ ಹೇಳುತ್ತಿದ್ದರು, ದೆವ್ವ  ಗಾಳಿ ಬಿಡಿಸಬೇಕು ಅಂತಾ ನಾಟಿ ವೈದ್ಯನ ಬಳಿ ಹೋದ ಆಕೆ ವಾಪಸ್ಸು ಬಂದಿದ್ದು ಮಾತ್ರ ಶವವಾಗಿ ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಶವದ ಮುಂದೆ ರೋದಿಸುತ್ತಿರುವ ಕುಟುಂಬಸ್ಥರು. ಮತ್ತೊಂದೆಡೆ  ಶವವನ್ನು ಟೆಂಪೊಗೆ ಹಾಕುತ್ತಿರುವ ನಾಟಿ ವೈದ್ಯ ಹಾಗೂ ಸ್ಥಳೀಯರು. ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಲಗುರ್ಕಿ ಗ್ರಾಮದಲ್ಲಿ. ಗುಡಿಬಂಡೆ ತಾಲೂಕಿನ ದಿನ್ನಹಳ್ಳಿ ಗ್ರಾಮದ ಸುಜಾತ ಎಂಬಾಕೆ ಮೇಲೆ ದೆವ್ವ ಬರುತ್ತೆ ಎಂದು  ಮಂತ್ರವಾದಿ ವೆಂಕಟೇಶಪ್ಪ ಬಳಿ ಮಂತ್ರ ಹಾಕಿಸಿಕೊಳ್ಳಲು ಬಂದಿದ್ದರು, ಈ ವೇಳೆ ಮಂತ್ರವಾದಿ ಮನೆಯಲ್ಲೇ ಸುಜಾತಮ್ಮ ಸಾವನ್ನಪ್ಪಿದ್ದಾಳೆ.


ಈಕಗೆ ಕಳೆದ 15 ವರ್ಷಗಳ ಹಿಂದೆ ಗೋವಿಂದಪ್ಪ ಎಂಬುವರ ಜೊತೆ ಮದುವೆಯಾಗಿದ್ದು,  ಮೂವರು ಮಕ್ಕಳಿದ್ದಾರೆ. ಆದರೆ ಈಕೆಗೆ ಕಳೆದ  4 ವರ್ಷಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಪಿ, ಶುಗರ್, ಕಾಯಿಲೆಯಿಂದ ಬಳಲುತ್ತಿದ್ದಳಂತೆ. ಈ ಕಾಯಿಲೆ ಒಂದು ಕಡೆ ಆದರೆ ಮತ್ತೊಂದೆಡೆ ಈಕೆಯ ಮೈಮೇಲೆ ದೆವ್ವ, ಗಾಳಿ ಬರುತ್ತಿತ್ತಂತೆ.


ಇನ್ನೂ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯರು ನಡೆಸುವ ಶವಪರೀಕ್ಷೆಯ ವರದಿಯಿಂದ ಈ ಸಾವಿಗೆ ಕಾರಣ ಏನು ಎಂದು ತಿಳಿಯಬೇಕಿದೆ.

 

Follow Us:
Download App:
  • android
  • ios