ಅಣ್ಣ - ತಂಗಿಯಾಗಬೇಕಿದ್ದವರು ಮದುವೆಯಾದ್ರು; ಸಾವಿನಲ್ಲಿ ಪ್ರೇಮ್ ಕಹಾನಿ ಅಂತ್ಯ

First Published 10, Feb 2018, 12:36 PM IST
Girl Suicide due to difference of opinion in Married Life
Highlights

ಸಂಬಂಧದಲ್ಲಿ ಅಣ್ಣ- ತಂಗಿಯಾಗಬೇಕಿದ್ದವರು ಪ್ರೀತಿಯ ಬಲೆಗೆ ಬಿದ್ದು ಪರಾರಿಯಾಗಿ ಸಂಸಾರ ಮಾಡಿದ್ರು.  ಊರು ಬಿಟ್ಟು ಬೇರೆಡೆ ನೆಲೆಸಿದ ಪ್ರೇಮಿಗಳ ಸಂಸಾರದಲ್ಲಿ ಬಿರುಕು ಮೂಡಿ ಕೊನೆಗೆ ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆ.

ಶಿವಮೊಗ್ಗ (ಫೆ.10): ಸಂಬಂಧದಲ್ಲಿ ಅಣ್ಣ- ತಂಗಿಯಾಗಬೇಕಿದ್ದವರು ಪ್ರೀತಿಯ ಬಲೆಗೆ ಬಿದ್ದು ಪರಾರಿಯಾಗಿ ಸಂಸಾರ ಮಾಡಿದ್ರು.  ಊರು ಬಿಟ್ಟು ಬೇರೆಡೆ ನೆಲೆಸಿದ ಪ್ರೇಮಿಗಳ ಸಂಸಾರದಲ್ಲಿ ಬಿರುಕು ಮೂಡಿ ಕೊನೆಗೆ ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆ.

ಆಕೆ ಸತ್ತ ನಂತರ ಮೃತದೇಹವನ್ನು ಹುಟ್ಟೂರಿಗೆ ತಂದವನಿಗೆ ಹುಡುಗಿಯ ಕಡೆಯವರು ಧರ್ಮದೇಟು ನೀಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ನಿನ್ನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಭದ್ರಾವತಿ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿ ನೇಣಿಗೆ ಶರಣಾಗಿದ್ದಳು. ಇಂದು ಭದ್ರಾವತಿಗೆ ಆಕೆಯ ಶವ ತಂದ ಯುವಕನಿಗೆ ಹುಡುಗಿಯ ಕಡೆಯವರು ಥಳಿಸಿದ್ದಾರೆ. 2016ರ ನವೆಂಬರ್​​ 19ರಂದು ಭದ್ರಾವತಿ ನಗರದ ತಮ್ಮಣ್ಣ ಕಾಲೋನಿಯ ಉಷಾ, ತನ್ನ ದೊಡ್ಡಪ್ಪನ ಮಗ ಆನಂದ್​ ಜೊತೆ ಓಡಿಹೋಗಿ ಹೊಸಪೇಟೆಯಲ್ಲಿ ವಾಸವಾಗಿದ್ದಳು. ಈ ಬಗ್ಗೆ ಭದ್ರಾವತಿಯ ಹೊಸಮನೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಭದ್ರಾವತಿಯ ಸರ್ಕಾರಿ ಅಸ್ಪತ್ರೆಯಲ್ಲಿ ಉಷಾ ಮೃತದೇಹದ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಇನ್ನೊಂದೆಡೆ ಥಳಿತಕ್ಕೆ ಒಳಗಾದ ಆನಂದನನ್ನು ಕೂಡ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪ್ರಾಪ್ತ ಬಾಲಕಿಯ ಪ್ರೇಮ ಕಹಾನಿಯೊಂದು ಸಾವಿನಲ್ಲಿ ಅಂತ್ಯವಾಗಿದೆ.  

loader