ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದವನು ಆಕೆ ಮದುವೆ ಆಗಲ್ಲ ಅಂದಿದ್ದಕ್ಕೆ ಕತ್ತುಕುಯ್ದ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಬೀದರ್ : ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದವನು ಆಕೆ ಮದುವೆ ಆಗಲ್ಲ ಅಂದಿದ್ದಕ್ಕೆ ಕತ್ತುಕುಯ್ದ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇಂತದ್ದೊಂದು ಘಟನೆ ನಡೆದಿದ್ದು ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮದಲ್ಲಿ. ಪಾಪಿ ಪ್ರೇಮಿಯ ಅಮಾನವೀಯ ಕೃತ್ಯದಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.

ಕೋಸಮ್ ಗ್ರಾಮದ ಶಹಾಬುದ್ದಿನ್, ಪಕ್ಕದ ಮನೆಯ ವಿದ್ಯಾರ್ಥಿನಿಯನ್ನು ಕಳೆದ ಕೆಲ ತಿಂಗಳಿಂದ ಪ್ರೀತಿಸುತ್ತಾ ಇದ್ದ. ಆದರೆ ಇದಕ್ಕೆ ಆಕೆ ಒಪ್ಪಿರಲಿಲ್ಲ. ಇಷ್ಟಾದರೂ ಕೂಡ ಶಹಾಬುದ್ದಿನ್, ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ.

ಇದಕ್ಕೂ ಕ್ಯಾರೇ ಎಂದಿರಲಿಲ್ಲ. ಇದರಿಂದ ಕೋಪಗೊಂಡ ಶಹಾಬುದ್ದಿನ್, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಮತ್ತು ಶವವನ್ನು ಖಾನಾಪೂರ ಅರಣ್ಯ ಪ್ರದೇಶದಲ್ಲಿ ಬಿಸಾಕಿ ಆಕೆಯ ಮನೆಯವರ ಬಳಿಗೆ ಬಂದು, ನಾನು ನಿನ್ನ ಮಗಳನ್ನು ಕೊಂದಿದ್ದೇನೆ ಅಂತ ತಪ್ಪೊಪ್ಪಿಕೊಂಡಿದ್ದಾನೆ.