ಮಂತ್ರಿಮಾಲ್'ಗೆ  ಶಾಪಿಂಗ್'ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದು ಗಾಯವಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.  

ಬೆಂಗಳೂರು (ಡಿ.15): ಮಂತ್ರಿಮಾಲ್'ಗೆ ಶಾಪಿಂಗ್'ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದು ಗಾಯವಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬಟ್ಟೆಗಳ ಆಫರ್ ಪ್ರದರ್ಶನಕ್ಕೆ ಇಟ್ಟ ಬೃಹತ್ ಬೋರ್ಡ್ ಯಲಹಂಕದ ಗುಣಶೀಲ ಎಂಬುವವರ ತಲೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಲೆಗೆ ಏಳು ಸ್ಟಿಚ್ ಹಾಕಲಾಗಿದೆ.

ಬೋರ್ಡ್ ಬಿದ್ದು ರಕ್ತ ಸೋರುತ್ತಿದ್ದರೂ ಆಸ್ಪತ್ರೆಗೂ ಕರೆದುಕೊಂಡು ಹೋಗದೆ ಅಲ್ಲಿನ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ. ನಂತರ ಅವರ ಪತಿ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಮ್ಮ ಕಡೆಯಿಂದ ತಪ್ಪಾಗಿದ್ರೂ ಮಂತ್ರಿ ಮಾಲ್'ನವರು ಮುಚ್ಚಿಕೊಳ್ಳುವ ಯತ್ನ ಮಾಡಿದ್ದಾರೆ. ತಲೆಯ ಮುಂಭಾಗಕ್ಕೆ ಏಟು ಬಿದ್ದಿದ್ದು ಎರಡು ದಿನ ಬಿಟ್ಟು ವೈದ್ಯರು ಎಂ ಆರ್ ಐ ಮಾಡಿಸೋದಕ್ಕೆ ಸೂಚಿಸಿದ್ದಾರೆ ಎಂದು ಗಾಯಾಳುವಿನ ಕುಟುಂಬಸ್ಥರು ಹೇಳಿದ್ದಾರೆ.