6 ವರ್ಷದ ವಿದ್ಯಾರ್ಥಿಗೆ ಶಾಲಾ ಆವರಣದಲ್ಲೇ ತಿವಿತ; ಸಂತ್ರಸ್ತನನ್ನು ಭೇಟಿಯಾದ ಸಿಎಂ

First Published 18, Jan 2018, 7:09 PM IST
Girl detained for stabbing Class 1 boy in Lucknow school  principal arrested
Highlights

ಒಂದನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ವಿದ್ಯಾರ್ಥಿನಿಯೊಬ್ಬಳು ಶಾಲಾ ಆವರಣದಲ್ಲೇ ತಿವಿದಿರುವ ಘಟನೆ ಲಕ್ನೋದ ಬ್ರೈಟ್'ಲ್ಯಾಂಡ್ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಯ ಎದೆ ಭಾಗಕ್ಕೆ, ಕಣ್ಣಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಲಕ್ನೋ (ಜ.18):  ಒಂದನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ವಿದ್ಯಾರ್ಥಿನಿಯೊಬ್ಬಳು ಶಾಲಾ ಆವರಣದಲ್ಲೇ ತಿವಿದಿರುವ ಘಟನೆ ಲಕ್ನೋದ ಬ್ರೈಟ್'ಲ್ಯಾಂಡ್ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಯ ಎದೆ ಭಾಗಕ್ಕೆ, ಕಣ್ಣಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ವಿದ್ಯಾರ್ಥಿನಿ ಹಾಗೂ  ಶಾಲಾ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದು, ಬಾಲಾಪರಾಧಿ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ. 6 ವರ್ಷದ ಬಾಲಕ ಹೃತಿಕ್ ಶರ್ಮಾ ಗಾಯಗೊಂಡ ವಿದ್ಯಾರ್ಥಿ.  ವಿದ್ಯಾರ್ಥಿನಿ ಆತನನ್ನು ಬಾತ್'ರೂಮ್ ಒಳಗೆ ಕರೆದುಕೊಂಡು ಹೋಗಿ ವಾಕುವಿನಿಂದ ತಿವಿದಿದ್ದಾಳೆ ಎಂದು ಪೋಷಕರಿಗೆ ತಿಳಿಸಿದ್ದಾನೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಸ್ಪತ್ರೆಗೆ ಭೇಟಿ ನೀಡಿದ್ದು ಹೃತಿಕ್ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಆತನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದಾರೆ.

 

loader