ಹೆಣ್ಣು ಮಕ್ಕಳ ದತ್ತು ಸ್ವೀಕಾರದಲ್ಲಿ ಕರ್ನಾಟಕ ನಂ.2

Girl Child Adoption on a rise in Karnataka
Highlights

ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ಕಾಣುವ ಕಾಲವೊಂದಿತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ದತ್ತು ಸ್ವೀಕರಿಸಿದ ಮಕ್ಕಳಲ್ಲಿ ಶೇ.60 ರಷ್ಟು ಮಂದಿ ಹೆಣ್ಣು ಮಕ್ಕಳಾಗಿದ್ದಾರೆ. ಹೆಣ್ಣು ಮಕ್ಕಳ ದತ್ತು ಸ್ವೀಕಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 

ನವದೆಹಲಿ: ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ಕಾಣುವ ಕಾಲವೊಂದಿತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ದತ್ತು ಸ್ವೀಕರಿಸಿದ ಮಕ್ಕಳಲ್ಲಿ ಶೇ.60 ರಷ್ಟು ಮಂದಿ ಹೆಣ್ಣು ಮಕ್ಕಳಾಗಿದ್ದಾರೆ. ಹೆಣ್ಣು ಮಕ್ಕಳ ದತ್ತು ಸ್ವೀಕಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 

2017-18ರಲ್ಲಿ ಒಟ್ಟು 3,276 ಮಕ್ಕಳನ್ನು ದತ್ತು ಸ್ವೀಕಾರ ಮಾಡಲಾಗಿದೆ. ಅವರಲ್ಲಿ 1,858 ಮಂದಿ ಹೆಣ್ಣುಮಕ್ಕಳಾಗಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ ಉತ್ತರಿಸಿದೆ. ಮಕ್ಕಳ ದತ್ತು ಸ್ವೀಕಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 2017 ರಲ್ಲಿ ದತ್ತು ಸ್ವೀಕರಿಸಿದ 642  ಮಕ್ಕಳಲ್ಲಿ 353 ಮಂದಿ ಹೆಣ್ಣು ಮಕ್ಕಳಾಗಿದ್ದಾರೆ. 

ಕರ್ನಾಟಕದಲ್ಲಿ 286 ಮಕ್ಕಳನ್ನು ದತ್ತು  ಸ್ವೀಕರಿಸಲಾಗಿದ್ದು, ಅವರಲ್ಲಿ 167 ಹೆಣ್ಣು ಮಕ್ಕಳಿದ್ದಾರೆ. ಅಂತರ್ ರಾಷ್ಟ್ರೀಯ ದತ್ತು ಸ್ವೀಕಾರ ಪ್ರಮಾಣವೂ ಹೆಚ್ಚಳವಾಗಿದ್ದು, ಅಮೆರಿಕ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್‌ನ ಕುಟುಂಬಗಳು ಭಾರತದ ಮಕ್ಕಳನ್ನು ದತ್ತು ಪಡೆದಿವೆ. 

loader