ಬೆಂಗಳೂರು(ಸೆ.14): ವರದಕ್ಷಿಣೆಗಾಗಿ ಮದುವೆ ಮುರಿಯಬಹುದು, ಇಲ್ಲ ಬೇರೆ ವಿಚಾರಕ್ಕೆ ಮದುವೆ ನಿಲ್ಲಬಹುದು. ಆದ್ರೆ ಒಂದು ನಾಯಿಗಾಗಿ ಯುವತಿಯೊಬ್ಬಳು ಮದುವೆಯನ್ನೇ ಮುರಿದುಕೊಂಡಿದ್ದಾಳೆ.
ಬೆಂಗಳೂರು ಮೂಲದ ಕರಿಷ್ಮಾ ಅಂಬಾಕೆ ಗುರ್ ಗಾಂವ್'ನಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡ್ತಿದ್ದಾಳೆ. ದೆಹಲಿ ಮೂಲದ ಯುವಕನೊಬ್ಬನ ಜೊತೆ ಕುಟುಂಬದವರು ಮದುವೆ ನಿಶ್ಚಯಿಸಿದ್ದಾರೆ. ಆ ನಂತರ ಇಬ್ಬರ ಮಧ್ಯೆ ಮಾತುಕತೆ ನಡೆಯುವಾಗ ಲೂಸಿ (ನಾಯಿ)ಯಿಂದ ಸಮಸ್ಯೆಯಾಗಬಹುದು ಎಂದು ಆ ಹುಡುಗ ಹೇಳಿದ್ದಾರೆ. ಹಾಗಿದ್ದರೆ ಈ ಮದುವೆಯೇ ಬೇಡ ಅಂತಾ ಎಂದು ಕರಿಷ್ಮಾ ಉತ್ತರಿಸಿದ್ದಾಳೆ.
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಯಾರೇ ಹೇಳಿದರೂ ನನ್ನ ನಾಯಿಯಿಂದ ದೂರ ಆಗುವ ಮಾತೇ ಇಲ್ಲ ಎಂದಿರುವ ಆಕೆಗೆ, ಆ ಹುಡುಗನಿಂದ "ಸರಿ, ಆ ನಾಯಿಯನ್ನೇ ಮದುವೆಯಾಗು" ಎಂಬ ಉತ್ತರ ಬಂದಿದೆ.
