ದುನಿಯಾ ವಿಜಯ್ ಹಾಗೂ ಅವರ ಕುಟುಂಬದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಏನದು ಕೇಸ್ ಇಲ್ಲಿದೆ ವಿವರ.

ಬೆಂಗಳೂರು, [ಅ.27]: ಸ್ಯಾಂಡಲ್​ವುಡ್​​ನ ದುನಿಯಾ ವಿಜಯ್ ಹಾಗೂ ಅವರ ಕುಟುಂಬದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. 

ದುನಿಯಾ ವಿಜಿ ಕುಟುಂಬ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಕುಟುಂಬದ ವಿರುದ್ಧ ಗಿರಿನಗರ ಪೊಲೀಸರು ಸ್ವಯಂ ಪ್ರೇರಿತವಾಗಿ ಸೊಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸೆಲೆಬ್ರಿಟಿ ಆಗಿದ್ದುಕೊಂಡು ಸಮಾಜಕ್ಕೆ ರೋಲ್ ಮಾಡೆಲ್ ಆಗಿರಬೇಕಾಗಿದ್ದ ಇವರು, ಸದಾ ಬೀದಿ ರಂಪಾಟ, ಹಾದಿ ರಂಪಾಟ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ಆರೋಪಿಸಿ 107 CRPC ಅಡಿಯಲ್ಲಿ ವಿಜಿ ಸೇರಿ ಕುಟುಂಬದ 7 ಜನರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ದುನಿಯಾ ವಿಜಯ್, ವಿಜಿ ಪತ್ನಿಯರಾದ ಕೀರ್ತಿ ಗೌಡ , ನಾಗರತ್ನ , ವಿಜಿ ತಂದೆ , ನಾಗರತ್ನ ತಮ್ಮ , ಮತ್ತಿಬ್ಬರು ಬಾಡಿ ಗಾರ್ಡ್ ಮೇಲೆ ದೂರು ದಾಖಲಾಗಿದ್ದು, ಮತ್ತೆ ಗಲಾಟೆ ಮಾಡಿಕೋಳ್ಳದಂತೆ ದುನಿಯಾ ವಿಜಿ ಕುಟುಂಬಕ್ಕೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.