ಮುಂಬೈ [ಜೂ.21] : ಶುಂಠಿಯ ದರವು ಗಗನಮುಖಿಯಾಗಿದೆ. ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರಿಂದ ಶುಂಠಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಏರಿದ್ದು, ಈ ನಿಟ್ಟಿನಲ್ಲಿ ದರವೂ ಕೂಡ ಭಾರೀ ಏರಿಕೆಯಾಗಿದೆ.

ಹೋಲ್ ಸೇಲ್, ರೀಟೇಲ್ ಮಾರುಕಟ್ಟೆಯಲ್ಲಿ ಶುಂಠಿ ಪ್ರತೀ ಕೆಜಿಯ ಮೇಲೆ ಶೇ. 20 ರಿಂದ 30 ರಷ್ಟು ಏರಿಕೆಯಾಗಿದ್ದು, ಬೆಲೆ 240 ರು. ತಲುಪಿದೆ.

ಒಂದು ತಿಂಗಳ ಹಿಂದೆ 200 ರು. ಇದ್ದ ಶುಂಠಿಯ ಬೆಲೆ ಇದೀಗ 240 ರು. ತಲುಪಿದೆ.  ಅತ್ಯಂತ ಕಡಿಮೆ ಇರುತಿದ್ದ ಸಿ ಗ್ರೇಡ್ ಶುಂಠಿ ಬೆಲೆಯೂ ಗಗನಮುಖಿಯಾಗಿದ್ದು, ಪ್ರತೀ ಕೆಜಿಗೆ 160 ರು. ತಲುಪಿದೆ.

ಅಲ್ಲದೇ ಗುಣಮಟ್ಟಕ್ಕೆ ಅನುಗುಣವಾಗಿ ದರವು ನಿರ್ಧಾರವಾಗುತ್ತಿದೆ. ಇನ್ನು ಮಾರಾಟಗಾರರು ಕೂಡ ಬೇಡಿಕೆಗೆ ಅನುಗುಣವಾಗಿ ದರವನ್ನೂ ನಿರಂತರವಾಗಿ ಏರಿಕೆ ಮಾಡುತಿದ್ದಾರೆ.