ಆಹಾರದಲ್ಲಿ ಉಪಯೋಗಿಸುವ ಶುಂಠಿ ಮತ್ತು ಮೆಣಸು ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯನ್ನು ತಡೆಯುತ್ತವೆ.
ಆಹಾರದಲ್ಲಿ ಶುಂಠಿ ಮತ್ತು ಮೆಣಸನ್ನು ನೀವು ಉಪಯೋಗಿಸುವುದರಿಂದ ಕ್ಯಾನ್ಸರ್ ರೋಗವನ್ನು ತಡೆಯಬಹುದು. ಇತ್ತೀಚಿನ ಸಂಶೋಧನೆಯೊಂದರಿಂದ ಈ ವರಧಿ ಹೊರಬಿದ್ದಿದೆ. ಆಹಾರದಲ್ಲಿ ಉಪಯೋಗಿಸುವ ಶುಂಠಿ ಮತ್ತು ಮೆಣಸು ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯನ್ನು ತಡೆಯುತ್ತವೆ. ಹಾಗೂ ಈ ಎರಡೂ ಮಸಾಲೆ ಪದಾರ್ಥಗಳೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
ಅಮೇರಿಕನ್ ಕೆಮಿಕಲ್ ಸೊಸೈಟಿ ಯ ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ನೆಡೆಸಿ ಶುಂಠಿ ಮತ್ತು ಮೆಣಸು ಸೇವಿಸಿದ ಇಲಿಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ರೋಗಾಣುಗಳ ವಿರುದ್ದ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚಿರುವುದು ಬೆಳಕಿಗೆ ಬಂದಿದೆ. ಈ ಮಸಾಲೆ ಪದಾರ್ಥಗಳನ್ನು ಆಹಾರದಲ್ಲಿ ದಿನನಿತ್ಯ ಉಪಯೋಗಿಸಿದವರಲ್ಲಿ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯೂ ಕಡಿಮೆಯಾಗಿರುವುದು ಕಂಡುಬಂದಿದೆ. ಶುಂಠಿ ಮತ್ತು ಮೆಣಸನ್ನು ಸೇವಿಸುವುದರಿಂದ ಮನುಷ್ಯರಲ್ಲಿ ರೋದನಿರೋಧಕ ಶಕ್ತಿಯೂ ಹೆಚ್ಚುವುದು ಸಂಶೋಧನೆಯಿಂದ ಸಾಬೀತಾಗಿದೆ.
