Asianet Suvarna News Asianet Suvarna News

9 ವರ್ಷದ ಹಿಂದೆ ನಾಪತ್ತೆಯಾಗಿದ್ದ ಹಡಗು ಪ್ರತ್ಯಕ್ಷ: ಸಿಬ್ಬಂದಿ ಏನಾದ್ರು?

ನೌಕಾಯಾನ ಜಗತ್ತನ್ನು ತಲ್ಲಣಗೊಳಿಸಿದ ಹಡಗು! 9 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹಡಗು ಪ್ರತ್ಯಕ್ಷ! ಹಿಂದೂ ಮಹಾಸಾಗರದಲ್ಲಿ ದಿಡೀರ್ ಪ್ರತ್ಯಕ್ಷವಾದ ಹಡಗು! ಪತ್ತೆಯಾದ ಹಡಗಿನಲ್ಲಿ ಸಿಬ್ಬಂದಿಯೇ ಇಲ್ಲ! ಸಿಬ್ಬಂದಿ ಇಲ್ಲದೇ ಏಕಾಂಗಿಯಾಗಿ ಸಂಚರಿಸುತ್ತಿರುವ ವಿಸ್ಮಯ ಹಡಗು 
 

Ghost ship reappears 9 years after it was lost
Author
Bengaluru, First Published Sep 3, 2018, 1:42 PM IST

ತೈವಾನ್(ಸೆ.4): ಈ ಜಗತ್ತೇ ಒಂದು ವಿಸ್ಮಯಗಳ ಆಗರ. ಇಲ್ಲಿ ದಿನಕ್ಕೊಂದು ವಿಸ್ಮಯ, ಅಪರೂಪದಲ್ಲೇ ಅಪರೂಪ ಎನಿಸುವಂತ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ವಿಚಿತ್ರ ಘಟನೆಗಳು ಮಾನವನ ಗಮನ ಸೆಳೆಯುತ್ತಾ, ಈ ಘಟನಾವಳಿಗಳಿಗೆ ಕಾರಣ ಹುಡುಕಲು ಆತನನ್ನು ಪ್ರೇರೆಪಿಸುತ್ತಲೇ ಇರುತ್ತದೆ.

ಅದರಂತೆ 9 ವರ್ಷಗಳ ಹಿಂದೆ ಹಿಂದೂ ಮಹಾಸಾಗರದಲ್ಲಿ ಕಳೆದು ಹೋಗಿದ್ದ ಬೃಹತ್ ಹಡಗೊಂದು, ಇದೀಗ ದಿಢೀರನೇ ಕಾಣಿಸಿಕೊಂಡಿದೆ. ಈ ಮೂಲಕ ನೌಕಾಯಾನ ಜಗತ್ತನ್ನೇ ದಿಗ್ಭ್ರಾಂತಗೊಳಿಸಿದೆ ಈ ಹಡಗು.

ಹೌದು, ಸ್ಯಾಮ್ ರಾಟುಲ್ಯಾಂಗಿ PB 1600 ಎಂಬ ಸರಕು ಸಾಗಾಣಿಕೆ ಹಡಗು 2009 ರಲ್ಲಿ ತೈವಾನ್ ಸಮೀಪ ಹಿಂದೂ ಮಹಾಸಾಗರದಲ್ಲಿ ಕಾಣೆಯಾಗಿತ್ತು. ಇಂಡೋನೇಷಿಯಾಗೆ ಸೇರಿದ ಈ ಹಡಗು ತೈವಾನ್ ಗೆ ತೆರಳುವ ಸಂದರ್ಭದಲ್ಲಿ ಕಾಣೆಯಾಗಿತ್ತು. ಅಂದಿನಿಂದ ಈ ಹಡಗಿಗಾಗಿ ಅದೆಷ್ಟೇ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

Ghost ship reappears 9 years after it was lost

ಆದರೆ ಕಳೆದ ವಾರ ಈ ಬೃಹತ್ ಹಡಗು ಮಯನ್ಮಾರ್ ಬಳಿ ಕಾಣಿಸಿಕೊಂಡಿದ್ದು, ಸಾಗರ ತಜ್ಞರನ್ನು ಅಚ್ಚರಿಗೆ ತಳ್ಳಿದೆ. ಅಚ್ಚರಿ ಎಂದರೆ ಈ ಹಡಗು ಪತ್ತೆ ಮಾಡಿದ ಮೀನುಗಾರರು ಒಳಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ.

ಅಂದರೆ ಕಳೆದ 9 ವರ್ಷಗಳಿಂದ ಈ ಹಡಗು ಸಿಬ್ಬಂದಿಯೇ ಇಲ್ಲದೇ ಸಾಗರದಲ್ಲಿ ಏಕಾಂಗಿಯಾಗಿ ಸಂಚರಿಸಿದೆ. ಅಲ್ಲದೇ ಈ ಹಡಗಿನ ಸಿಬ್ಬಂದಿ ಎಲ್ಲಿದ್ದಾರೆ ಎಂಬುದೇ ಇದೀಗ ಎಲ್ಲರ ಮುಂದಿರುವ ಪ್ರಶ್ನೆ.

ಈ ಹಡಗು ಈಗಲೂ ಚಾಲನೆಗೆ ಶಕ್ತವಾಗಿದ್ದು, ಇದು 9 ವರ್ಷಗಳ ಕಾಲ ಎಲ್ಲಿತ್ತು ಎಂಬ ಪ್ರಶ್ನೆ ಸಾಗರ ತಜ್ಞರನ್ನು ಕಾಡುತ್ತಿದ್ದು, ಇದಕ್ಕೆ ಗೋಸ್ಟ್ ಶಿಪ್(ರಾಕ್ಷಸ ಹಡಗು) ಎಂದು ಹೆಸರಿಡಲಾಗಿದೆ.
 

Follow Us:
Download App:
  • android
  • ios