ರಾಮನಗರದಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರಿಗೆ ಕಂಡ ಆಕೃತಿಗಳು ಯಾವುವು? ಅದು ಭೂತವಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿವೆ.
ಬೆಂಗಳೂರು(ನ. 06): ಭಾರೀ ವಿರೋಧಗಳ ನಡುವೆ ಪ್ರಾರಂಭವಾದ ಕನ್ನಡದ ಬಿಗ್ ಬಾಸ್ ಸೀಸನ್ 4ರಲ್ಲಿ ಮತ್ತೊಂದು ಅಚ್ಚರಿ ಎದುರಾಗಿದೆ. ವಾಶ್ ರೋಮ್'ನಲ್ಲಿ ಮುಖ ತೊಳೆಯಲು ಹೋದಂತಹ ಇಬ್ಬರು ಸ್ಪರ್ಧಿಗಳಿಗೆ ಕನ್ನಡಿಯಲ್ಲಿ ಆಕೃತಿಯೊಂದು ಕಾಣಿಸಿದ್ದು, ಸ್ಪರ್ಧಿಗಳು ಭಯಭೀತರಾದ ಘಟನೆ ನಡೆದಿದೆ. ಸ್ಪರ್ಧಿಗಳಾದ ಕಾರುಣ್ಯ ಮತ್ತು ಸಂಜನಾ ಇಬ್ಬರಿಗೂ ಕನ್ನಡಿಯಲ್ಲಿ ಆಕೃತಿಗಳು ಗೋಚರವಾಗಿವೆ. ಇದನ್ನು ಕಂಡ ಇವರಿಬ್ಬರು ನೆಲಕ್ಕುರುಳಿ ಚೀರಾಡಿದ್ದಾರೆ.
ರಾಮನಗರದಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರಿಗೆ ಕಂಡ ಆಕೃತಿಗಳು ಯಾವುವು? ಅದು ಭೂತವಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿವೆ. ಆದರೆ, ಇದು ಪಬ್ಲಿಸಿಟಿ ಗಿಮಿಕ್ ಆಗಿರಬಹುದು, ಅಥವಾ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುತ್ತಿರುವ ಅಚ್ಚರಿಯ ಶಾಕ್ ಆಗಿರಬಹುದು ಎಂಬಿತ್ಯಾದಿ ಕೋನಗಳಲ್ಲಿ ಚರ್ಚೆಯಾಗುತ್ತಿದೆ.
