ರಾಜಸ್ಥಾನ ವಿಧಾನಸಭೆಗೂ ಭೂತದ ಕಾಟ!

news | Saturday, February 24th, 2018
Suvarna Web Desk
Highlights

ಹಾರ ಸಿಎಂ ನಿತೀಶ್‌ ಕುಮಾರ್‌ ಪ್ರೇತಾತ್ಮ ಬಿಟ್ಟಿದ್ದಾರೆ ಎಂದು ಹೆದರಿ, ಲಾಲು ಪುತ್ರ ತೇಜ್‌ಪ್ರತಾಪ್‌ ಯಾದವ್‌ ಸರ್ಕಾರಿ ಬಂಗ್ಲೆ ಖಾಲಿ ಮಾಡಿದ್ದಾಯಿತು. ಈಗ ರಾಜಸ್ಥಾನ ವಿಧಾನಸಭಾ ಭವನದಲ್ಲೂ ಇಂತದ್ದೇ ಒಂದು ಸಮಸ್ಯೆ ಎದುರಾಗಿರುವ ಬಗ್ಗೆ ಶಾಸಕರಲ್ಲೇ ಶಂಕೆ ಮೂಡಿದೆ.

ಜೈಪುರ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪ್ರೇತಾತ್ಮ ಬಿಟ್ಟಿದ್ದಾರೆ ಎಂದು ಹೆದರಿ, ಲಾಲು ಪುತ್ರ ತೇಜ್‌ಪ್ರತಾಪ್‌ ಯಾದವ್‌ ಸರ್ಕಾರಿ ಬಂಗ್ಲೆ ಖಾಲಿ ಮಾಡಿದ್ದಾಯಿತು. ಈಗ ರಾಜಸ್ಥಾನ ವಿಧಾನಸಭಾ ಭವನದಲ್ಲೂ ಇಂತದ್ದೇ ಒಂದು ಸಮಸ್ಯೆ ಎದುರಾಗಿರುವ ಬಗ್ಗೆ ಶಾಸಕರಲ್ಲೇ ಶಂಕೆ ಮೂಡಿದೆ.

ರಾಜಸ್ಥಾನ ವಿಧಾನಸಭೆ ಸದಸ್ಯರ ಸಂಖ್ಯೆ ಯಾವಾಗಲೂ 200ರಿಂದ ಹೆಚ್ಚು ದಾಟುವುದಿಲ್ಲವಂತೆ. ಯಾರಾದರೊಬ್ಬರು ರಾಜೀನಾಮೆ ನೀಡುತ್ತಾರೆ, ಜೈಲಿಗೆ ಹೋಗುತ್ತಾರೆ ಅಥವಾ ಅಕಾಲಿಕ ಸಾವು ಸಂಭವಿಸುತ್ತದೆ. ಇದಕ್ಕೆಲ್ಲ ಕಾರಣ, ವಿಧಾನಸಭೆಯಲ್ಲಿ ಪ್ರೇತಾತ್ಮಗಳ ಶಕ್ತಿ ಇರಬಹುದು ಎಂಬ ಶಂಕೆ ಶಾಸಕರಲ್ಲಿ ಮೂಡಿಸಿದೆ ಎನ್ನಲಾಗಿದೆ. ಈ ಬಗ್ಗೆ ಕೆಲವರು ಸಿಎಂ ವಸುಂಧರಾ ರಾಜೇ ಜೊತೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದು, ಅರ್ಚಕರನ್ನು ಕರೆಸಿ, ಕೆಟ್ಟಆತ್ಮವನ್ನು ಶಾಂತಗೊಳಿಸುವಂತೆ ಕೋರಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ಅರ್ಚಕರೊಬ್ಬರು ವಿಧಾನಸಭೆ ಪ್ರವೇಶದಲ್ಲಿ ಈ ಕುರಿತು ಪೂಜಾ ವಿಧಿವಿಧಾನ ನಡೆಸಿದ್ದಾರೆ. 2001ರಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ವಿಧಾನಸಭಾ ಕಟ್ಟಡದ ಭೂಮಿಯ ಒಂದು ಭಾಗ ಹಿಂದೆ ಸ್ಮಶಾನವಾಗಿತ್ತು. ಮಂಗಳವಾರವಷ್ಟೇ ಬಿಜೆಪಿಯ ಹಾಲಿ ಶಾಸಕ ಸಿಂಗ್‌ ಚೌಹಾಣ್‌ ಮೃತಪಟ್ಟಿದ್ದುದು, ಶಾಸಕರ ನಂಬಿಕೆಯನ್ನು ಇನ್ನಷ್ಟುಬಲಪಡಿಸಿತ್ತು.

Comments 0
Add Comment

    Kaduru MLA YSV Datta taken class by JDS activists

    video | Thursday, April 12th, 2018
    Suvarna Web Desk