ಸೆಕ್ಸಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿ ಎಲ್ಲರ ನಿದ್ದೆಗೆಡಿಸುತ್ತಿದ್ದ ಮಹಿಳಾ ಪೊಲೀಸ್ ಒಬ್ಬರಿಗೆ ಕೆಲಸ ಬಿಡಿ ಇಲ್ಲವೇ ಮಾಡೆಲಿಂಗ್ ಮಾಡಿ ಎಂಬ ವಾರ್ನಿಂಗ್ ನೀಡಿದ್ದಾರೆ.

ಪೊಲೀಸ್‌ ಆದವರು ರಫ್‌ ಆ್ಯಂಡ್‌ ಟಫ್‌ ಆಗಿರಬೇಕು. ಅದನ್ನು ಬಿಟ್ಟು ಮೈಮಾಟ ತೋರಿಸಿದರೆ ಹೇಗೆ? ಜರ್ಮನಿಯ ಡ್ರೆಸ್ಡೆನ್‌ ಪ್ರಾಂತ್ಯದ ಪೊಲೀಸ್‌ ಅಧಿಕಾರಿ ಆಡ್ರಿನ್‌ ಕೊಸ್ಜಾರ್‌ ಎಂಬಾಕೆ ತನ್ನ ಸುಂದರ ಮೈಮಾಟದಿಂದಲೇ ಖ್ಯಾತಿ ಪಡೆದಿದ್ದಾಳೆ. ಆಕೆ ತನ್ನ ಸೆಕ್ಸಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿ ಎಲ್ಲರ ನಿದ್ದೆಗೆಡಿಸಿದ್ದಾಳೆ.

ಪಾರದರ್ಶಕ ತುಂಡುಡುಗೆ ತೊಟ್ಟ ನಟಿಗೆ 5 ವರ್ಷ ಜೈಲು ಶಿಕ್ಷೆ

ಆದರೆ, ಈ ಕಾರಣಕ್ಕಾಗಿಯೇ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮಾಡೆಲಿಂಗ್‌ ಅಥವಾ ಪೋಲಿಸ್‌ ಹುದ್ದೆ ಇವೆರಡಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಒಳಿತು ಎಂದು ಎಚ್ಚರಿಕೆ ನೀಡಿದ್ದಾರಂತೆ.

View post on Instagram

34 ವರ್ಷದ ಆಡ್ರಿನ್‌ ಕೊಸ್ಜಾರ್‌ ಇನ್ಸ್ಟಾಗ್ರಾಂನಲ್ಲಿ ತನ್ನದೇ ಆದ ಅಭಿಮಾನಿ ವರ್ಗ ಹೊಂದಿದ್ದು, 5 ಲಕ್ಷ 90 ಸಾವಿರಕ್ಕೂ ಅಧಿಕ ಪಾಲೋವರ್ಸ್ ಹೊಂದಿದ್ದಾರೆ.