ಚಿಂತಕ ಪಾರ್ಥ ಚಟರ್ಜಿ ತಮ್ಮ ಲೇಖನದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರನ್ನು ಬ್ರಿಟಿಷ್ ಜನರಲ್ ಡೈಯರ್ ಗೆ ಹೋಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಪಾರ್ಥರವರ ಮೇಲೆ ಕಿಡಿ ಕಾರಿದ್ದಾರೆ.

ನವದೆಹಲಿ (ಜೂ.07); ಚಿಂತಕ ಪಾರ್ಥ ಚಟರ್ಜಿ ತಮ್ಮ ಲೇಖನದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರನ್ನು ಬ್ರಿಟಿಷ್ ಜನರಲ್ ಡೈಯರ್ ಗೆ ಹೋಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಪಾರ್ಥರವರ ಮೇಲೆ ಕಿಡಿ ಕಾರಿದ್ದಾರೆ.

ಪಾರ್ಥ ಚಟರ್ಜಿ ಹಾಗೂ ಕಾಂಗ್ರೆಸ್ ನಾಯಕರು ಬಿಪಿನ್ ರಾವತ್ ಅವರನ್ನು ಜನರಲ್ ಡೈಯರ್ ಗೆ ಹೋಲಿಸಿರುವುದು ಖೇದನೀಯ ವಿಚಾರ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರುವಾರಿ ಜನರಲ್ ಡೈಯರ್ ಗೆ ಬಿಪಿನ್ ರಾವತ್ ರನ್ನು ಹೋಲಿಸಿ ಮಾತನಾಡಿರುವುದು ಅಮಾನವೀಯವೆಂದು ವೆಂಕಯ್ಯನಾಯ್ಡು ಕೂಡಾ ಖಂಡಿಸಿದ್ದಾರೆ.

ದೇಶದ ಭದ್ರತೆಯನ್ನು, ಒಗ್ಗಟ್ಟು, ಸಮಗ್ರತೆಯನ್ನು ಕಾಪಾಡುತ್ತಾ ಸೇನೆ ಉತ್ತಮ ಕೆಲಸ ಮಾಡುತ್ತಿದೆ. ಇದರಲ್ಲಿ ಚಟರ್ಜಿಯವರು ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಸೇನೆಯನ್ನು ಖಂಡಿಸಲು ಬಯಸುತ್ತಾರೆಯೇ ವಿನಾ ಬೆಂಬಲಿಸುವುದಿಲ್ಲ. ಗೋಗೋಯ್ ಘಟನೆ ನಂತರ ಬಿಪಿನ್ ರಾವತ್’ರನ್ನು ಜನರಲ್ ಡೈಯರ್’ಗೆ ಹೋಲಿಸಿರುವುದು ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ನನ್ನ ಲೇಖನದಲ್ಲಿ ನನ್ನ ವಾದವನ್ನು ಮಂಡಿಸಿದ್ದೇನೆ. ಸ್ಪಷ್ಟನೆ ನೀಡುವ ಅಗತ್ಯ ಬಿದ್ದರೆ ನಾನು ಮತ್ತೊಮ್ಮೆ ಲೇಖನ ಬರೆಯುತ್ತೇನೆ. ನಾನು ಏನು ಬರೆದಿದ್ದೆನೋ ಅದಕ್ಕೆ ನಾನು ಬದ್ಧವಾಗಿದ್ದೇನೆ ಎಂದು. ನಾನು ಪಬ್ಲಿಸಿಟಿಗಾಗಿ ಈ ರೀತಿ ಬರೆದಿಲ್ಲ ಎಂದು ಪಾರ್ಥ ಚಟರ್ಜಿ ಹೇಳಿದ್ದಾರೆ.