ಸೆ.27ರ ರಾತ್ರಿ 12.30ರ ಸುಮಾರಿಗೆ ಪಾನಮತ್ತನಾಗಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್‌ ಎಂಡ್‌ ವೃತ್ತದಲ್ಲಿ ಓಮ್ನಿ ವ್ಯಾನ್‌'ಗೆ ಡಿಕ್ಕಿ ಮಾಡಿದ್ದ. ಈ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದರು.
ಬೆಂಗಳೂರು(ಅ.04): ಪಾನಮತ್ತರಾಗಿ ಬೆಂಜ್ ಕಾರು ಚಲಾಯಿಸಿ 6 ಮಂದಿ ಗಾಯಗೊಳ್ಳಲು ಕಾರಣನಾಗಿದ್ದ ಉದ್ಯಮಿ ದಿ. ಆದಿಕೇಶವಲು ಮೊಮ್ಮಗ ಗೀತಾವಿಷ್ಣುವಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಸಿಆರ್'ಪಿಸಿ 436ರಡಿಯಲ್ಲಿ ಎಸಿಎಂಎಂ ಕೋರ್ಟ್ ಇಬ್ಬರ ಶ್ಯೂರಿಟಿ ಹಾಗೂ 25 ಸಾವಿರ ರೂಪಾಯಿ ಬಾಂಡ್ ನೀಡಲು ಸೂಚಿಸಿದ್ದು,ವಿಚಾರಣೆಗೆ ಸಹಕರಿಸುವಂತೆ ತಿಳಿಸಿದೆ. ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾವಿಷ್ಣು ಮಡಿಕೇರಿಯಲ್ಲಿರುವ ತನ್ನ ಅತಿಥಿಗೃಹದಲ್ಲೇ ಬಂಧಿತನಾಗಿದ್ದ.
ಸೆ.27ರ ರಾತ್ರಿ 12.30ರ ಸುಮಾರಿಗೆ ಪಾನಮತ್ತನಾಗಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಓಮ್ನಿ ವ್ಯಾನ್'ಗೆ ಡಿಕ್ಕಿ ಮಾಡಿದ್ದ. ಈ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದರು. ಎಸ್'ಯುವಿ ಕಾರಲ್ಲಿ 110 ಗ್ರಾಂ ಗಾಂಜಾ ಸಹ ಪತ್ತೆಯಾಗಿತ್ತು. ನಂತರ ತನ್ನ ಕುಟುಂಬದ ಮಾಲೀಕತ್ವದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ, ಸೆ.29ರ ಬೆಳಗಿನ ಜಾವ ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದಿಂದ ಪರಾರಿಯಾಗಿದ್ದ. ವಿಚಾರಣೆಯ ಸಂದರ್ಭದಲ್ಲಿ ಅಪಘಾತದ ವೇಳೆಯಲ್ಲಿ ಯಾರ್ಯಾರು ಇದ್ದರೂ ಎನ್ನುವ ಕುರಿತು ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಕನ್ನಡದ ಇಬ್ಬರು ನಟರ ಹೆಸರೂ ಕೂಡಾ ತಳಕು ಹಾಕಿಕೊಂಡಿತ್ತು. ಹೀಗಾಗಿ ಈ ಪ್ರಕರಣ ಸಾಕಷ್ಟು ಗಮನ ಸೆಳೆದಿತ್ತು.
