ನವದೆಹಲಿ, [ಅ.25]: ಜಮ್ಮು ಮತ್ತು ಕಾಶ್ಮೀರ, ಗೋವಾ, ಲಡಾಖ್​​ ಹಾಗೂ ಮಿಜೋರಾಂಗೆ ಹೊಸ ರಾಜ್ಯಪಾಲರನ್ನ ನೇಮಿಸಲಾಗಿದೆ. 

ಅನರ್ಹರ ವಿಚಾರಣೆ ಮುಗೀತು,ಕರ್ನಾಟಕ ಕಪ್ ಗೆದ್ದಿತು; ಇಲ್ಲಿವೆ ಅ.25ರ ಟಾಪ್ 10 ಸುದ್ದಿ!

ನೂತನವಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್‌ ಮಲಿಕ್‌ ಅವರನ್ನು ಗೋವಾ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ. 

ಇನ್ನು ಸದ್ಯ ಕೇಂದ್ರ  ಹಣಕಾಸು ಸಚಿವಾಲಯದಲ್ಲಿ ಖರ್ಚು-ವೆಚ್ಚ  ಕಾರ್ಯದರ್ಶಿಯಾಗಿದ್ದ ಗಿರೀಶ್‌ ಚಂದ್ರ ಮುರ್ಮು ಅವರನ್ನು ಜಮ್ಮು ಮತ್ತು ಕಾಶ್ಮೀರದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾಗಿರುವ ಲಡಾಕ್ ರಾಜ್ಯಪಾಲರನ್ನಾಗಿ ರಾಧಾ ಕೃಷ್ಣ ಮಾಥುರ್ ಅವರನ್ನು ನೇಮಿಸಲಾಗಿದೆ.

ಜಮ್ಮು ಕಾಶ್ಮೀರ ಮತ್ತು ಲಡಾಖ್​​ ಅಕ್ಟೋಬರ್​ 31ರಿಂದ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲಿವೆ. ಈ ಹಿನ್ನೆಲೆಯಲ್ಲಿ ನೂತನ ರಾಜ್ಯಪಾಲರ ನೇಮಕಾತಿ ಆದೇಶ ಹೊರಬಿದ್ದಿದೆ.

ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರನ್ನು ಮಿಝೋರಂ ರಾಜ್ಯಪಾರನ್ನಾಗಿ ನೇಮಿಸಿಲಾಗಿದೆ.