ಗೌರಿ ಲಂಕೇಶ್ ಅವರು ಶೋಷಿತರ ಪರವಾಗಿ ಲೇಖನ ಬರೆದು ಧ್ವನಿ ಎತ್ತಿದ್ದಾರೆ. ಧಾರ್ಮಿಕ ಮೂಲಭೂತವಾದವನ್ನು ಖಂಡಿಸುವ ಜೊತೆಗೆ ಸೌಹಾರ್ದತೆಗಾಗಿ ಶ್ರಮಿಸಿದ್ದಾರೆ. ಅವರ ಹತ್ಯೆಯು ಕೊಲೆ ಹಾಗೂ ಭಯೋತ್ಪಾದನೆ ಕೃತ್ಯವಾಗಿದೆ ಎಂದು, ನಟ ಚೇತನ್ ಹೇಳಿದ್ದಾರೆ.

ಬೆಂಗಳೂರು: ಗೌರಿ ಲಂಕೇಶ್ ಅವರು ಶೋಷಿತರ ಪರವಾಗಿ ಲೇಖನ ಬರೆದು ಧ್ವನಿ ಎತ್ತಿದ್ದಾರೆ. ಧಾರ್ಮಿಕ ಮೂಲಭೂತವಾದವನ್ನು ಖಂಡಿಸುವ ಜೊತೆಗೆ ಸೌಹಾರ್ದತೆಗಾಗಿ ಶ್ರಮಿಸಿದ್ದಾರೆ. ಅವರ ಹತ್ಯೆಯು ಕೊಲೆ ಹಾಗೂ ಭಯೋತ್ಪಾದನೆ ಕೃತ್ಯವಾಗಿದೆ ಎಂದು, ನಟ ಚೇತನ್ ಹೇಳಿದ್ದಾರೆ.

ಇಂದು ಶಾಸಕರ ಭವನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ’ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇತನ್, ಗೌರಿ ಲಂಕೇಶ್ ನನಗೆ ಪರಿಚಯವಿದ್ದರು. ನಾನು ಅವರನ್ನು ಬಹಳ ಗೌರವಿಸುತ್ತಿದ್ದೆ ಮತ್ತು ಮುಂದಕ್ಕೂ ಹೆಚ್ಚು ಗೌರವಿಸುತ್ತೇನೆ. ಅವರು ಅಂಬೇಡ್ಕರ್ ಮತ್ತು ಬಸವಣ್ಣನವರ ವಿಚಾರಗಳನ್ನು ಕಲಿಸಿದ್ದಾರೆ ಎಂದು ನೆನೆಪಿಸಿಕೊಂಡರು.

ಪ್ರಜಾಪ್ರಭುತ್ವವನ್ನು ನುಚ್ಚು ನೂರು ಮಾಡಲು ಹೊರಟವರು ಮೊದಲು ಗುರಿ ಮಾಡುವುದು ಹೋರಾಟಗಾರರನ್ನು ಮತ್ತು ಪತ್ರಕರ್ತರನ್ನು. ಗೌರಿ ಲಂಕೇಶ್ ಇವೆರಡೂ ಆಗಿದ್ದರು, ಎಂದು ಅವರು ಹೇಳಿದ್ದಾರೆ.

ಎಸ್’ಐಟಿ ಶೀಘ್ರದಲ್ಲಿ ಹಂತಕರನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿರುವ ಚೇತನ್, ನಾವು ಅಹಿಂಸೆಯಲ್ಲಿ ನಂಬಿಕೆಯಿಟ್ಟಿರುವವರು. ಹೊಡೆಯುವರಲ್ಲಿ ಶಕ್ತಿಯಿರುವುದಿಲ್ಲ ಬದಲಿಗೆ ಹೊಡೆಸಿಕೊಳ್ಳುವವರಲ್ಲಿ ಶಕ್ತಿ ಇರುತ್ತದೆ. ಗನ್ ಗಿಂತ ಪೆನ್ ಶಕ್ತಿ ದೊಡ್ಡದು ಮತ್ತು ಬುಲೆಟ್ ಗಿಂತ ಬ್ಯಾಲೆಟ್ ಮುಖ್ಯ ಎಂದು ಹೇಳಿದ್ದಾರೆ.