ರಾಜ್ಯದಲ್ಲಿ ಮತ್ತೊಮ್ಮೆ ದುಷ್ಕರ್ಮಿಗಳ ಅಟ್ಟಹಾಸಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆರಾಜರಾಜೇಶ್ವರಿನಗರದ ಮನೆ ಬಾಗಿಲಲ್ಲೇ ಕೊಲೆಒಂದೇ ನಿಮಿಷದಲ್ಲಿ ಆರು ಸುತ್ತು ಗುಂಡಿನ ದಾಳಿಗೌರಿ ಲಂಕೇಶ್ ದೇಹಕ್ಕೆ ನುಗ್ಗಿವೆ 4 ಬುಲೆಟ್ಸ್ಥಳದಲ್ಲೇ ಕುಸಿದು ಬಿದ್ದು ಗೌರಿ ಲಂಕೇಶ್ ಸಾವು
ಬೆಂಗಳೂರು: ಖ್ಯಾತ ಸಾಹಿತಿ ಎಂಎಂ ಕಲಬುರ್ಗಿ ಹತ್ಯೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಇಡೀ ದೇಶ ಬೆಚ್ಚಿಬೀಳುವ ಇನ್ನೊಂದು ಹತ್ಯೆಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ. ನಾಡಿನ ಹಿರಿಯ ಪತ್ರಕರ್ತೆ ಹಾಗೂ ಬುದ್ದಿಜೀವಿ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ರಾಜರಾಜೆಶ್ವರಿ ನಗರದಲ್ಲಿರುವ ಅವರ ನಿವಾಸದ ಮೇಲೆ ಇಂದು ಸಂಜೆ ಸುಮಾರು 6.30ರ ಹೊತ್ತಿಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಸಂಜೆ ಮನೆ ಬಾಗಿಲನ್ನು ತಟ್ಟಿದ್ದಾರೆನ್ನಲಾಗಿದ್ದು, ಗೌರಿ ಬಾಗಿಲು ತೆರೆದಾಗ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗೌರಿ ತಕ್ಷಣ ಕುಸಿದು ಬಿದ್ದಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗೌರಿ ಲಂಕೇಶ್ ಗಾಂಧಿ ಬಝಾರ್’ನಲ್ಲಿರುವ ತಮ್ಮ ಕಚೇರಿಯಲ್ಲಿ ಕೆಲಸ ಮಾಡಿ, ದೀಪಾವಳಿ ಸಂಚಿಕೆ ಮುಗಿಸಿ ಮನೆಗೆ ಬಂದಿದ್ದರು. ಮನೆಯಿಂದ ಕಾರು ನಿಲ್ಲಿಸಿ ಹೊರಬೇಕಾದರೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ.
ಆರ್. ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ರಾಮಲಿಂಗ ರೆಡ್ಡಿ, ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್, ಕೆಂಗೇರಿ ಡಿಸಿಪಿ ಅನುಚೇತ್ ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಗೌರಿ ಪಾರ್ಥೀವ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ.


ಪದಗಳೇ ಬರ್ತಿಲ್ಲ, ಹೇಗೆ ಹೇಳ್ಬೇಕು ಎಂದು ಗೊತ್ತಾಗ್ತಿಲ್ಲ: ಇಂದ್ರಜಿತ್ ಲಂಕೇಶ್
ವಿಕ್ಟೋರಿಯಾ ಆಸ್ಪತ್ರೆಗೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಭೇಟಿ ನೀಡಿದ್ದು, ದುಷ್ಕರ್ಮಿಗಳನ್ನು ಆದಷ್ಟು ಬೇಗ ಹಿಡಿಯಲಿ ಎಂದು ಆಗ್ರಹಿಸಿದ್ದಾರೆ.
ನಮ್ಮ ಅಕ್ಕ ಒರ್ವ ಮಹಿಳೆಯಾಗಿ ಸಾಕಷ್ಟು ಹೋರಾಟಗಳನ್ನು ಮಾಡ್ಕೊಂಡು ಬಂದಿದ್ದಾರೆ. ನನಗೆ ಪದಗಳೇ ಬರ್ತಿಲ್ಲ, ಹೇಗೆ ಹೇಳ್ಬೇಕು ಎಂದು ಗೊತ್ತಾಗ್ತಿಲ್ಲ. ದುಷ್ಕರ್ಮಿಗಳನ್ನು ಆದಷ್ಟು ಬೇಗ ಹಿಡಿಯಲಿ ಎಂದು ಹೇಳಿದ್ದಾರೆ.
