ಸುವರ್ಣನ್ಯೂಸ್'ಗೆ ಬಂದಿರುವ ಮಾಹಿತಿ ಪ್ರಕಾರ ಎಸ್'ಐಟಿಯು ತನಿಖೆಯ ರೂಪುರೇಖೆಯನ್ನೇ ಬದಲಿಸಲು ನಿರ್ಧರಿಸಿದೆ. ತನಿಖೆಯಲ್ಲಿ ತಾಂತ್ರಿಕ ಉಪಕರಣಗಳ ಅವಲಂಬನೆ ಬದಲು ಮೈಂಡ್'ಗೇಮ್ ತಂತ್ರ ಅನುಸರಿಸಲು ತನಿಖಾಧಿಕಾರಿಗಳು ಡಿಸೈಡ್ ಮಾಡಿದ್ದಾರೆನ್ನಲಾಗಿದೆ.
ಬೆಂಗಳೂರು(ಸೆ. 27): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡಿದರೂ ಅಪರಾಧಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ವಿಶೇಷ ತನಿಖಾ ತಂಡವು ತಾಂತ್ರಿಕವಾಗಿ ಜಾಲಾಡಿದರೂ ಕೊಲೆಗಾರರ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ಸುವರ್ಣನ್ಯೂಸ್'ಗೆ ಬಂದಿರುವ ಮಾಹಿತಿ ಪ್ರಕಾರ ಎಸ್'ಐಟಿಯು ತನಿಖೆಯ ರೂಪುರೇಖೆಯನ್ನೇ ಬದಲಿಸಲು ನಿರ್ಧರಿಸಿದೆ. ತನಿಖೆಯಲ್ಲಿ ತಾಂತ್ರಿಕ ಉಪಕರಣಗಳ ಅವಲಂಬನೆ ಬದಲು ಮೈಂಡ್'ಗೇಮ್ ತಂತ್ರ ಅನುಸರಿಸಲು ತನಿಖಾಧಿಕಾರಿಗಳು ಡಿಸೈಡ್ ಮಾಡಿದ್ದಾರೆನ್ನಲಾಗಿದೆ. 20 ವರ್ಷಗಳ ಹಿಂದಿನ ಸಾಂಪ್ರದಾಯಿಕ ತನಿಖಾ ತಂತ್ರವನ್ನು ಅಳವಡಿಸಿಕೊಳ್ಳಲು ಎಸ್'ಐಟಿ ಸಜ್ಜಾಗಿದೆ. "ಆ ದಿನಗಳು" ಮಾದರಿಯಲ್ಲಿ ತನಿಖೆ ನಡೆಯಲಿದೆ. ಇದಕ್ಕಾಗಿ ಸಾಂಪ್ರದಾಯಿಕ ತನಿಖಾ ತಜ್ಞರನ್ನು ಎಸ್'ಐಟಿ ತಂಡವು ಕಲೆಹಾಕುತ್ತಿದೆ.
