ಗೌರಿ ಹಂತಕರು ಎಸ್’ಐಟಿಯನ್ನು ನೆಗ್ಲೆಕ್ಟ್ ಮಾಡಿದ್ದೇ ವರದಾನವಾಯ್ತಾ?

Gauri Lankesh Murder Case Investigation in final stage
Highlights

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ  ಹಂತಕರು ಕರ್ನಾಟಕ ಪೊಲೀಸರನ್ನು ನಿರ್ಲಕ್ಷಿಸಿದ್ದೇ ಎಸ್ ಐಟಿ ಗೆ ವರದಾನವಾಯಿತು.  ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಿಲ್ಲ ಎಂದು ಹಂತಕರು ಊಹಿಸಿದ್ದರು.  ಇದೇ ಕಾರಣಕ್ಕೆ ಭಗವಾನ್ ಹತ್ಯೆಗೆ ಮುಂದಾಗಿದ್ದರು. 

ಬೆಂಗಳೂರು (ಜೂ. 25): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ  ಹಂತಕರು ಕರ್ನಾಟಕ ಪೊಲೀಸರನ್ನು ನಿರ್ಲಕ್ಷಿಸಿದ್ದೇ ಎಸ್ ಐಟಿ ಗೆ ವರದಾನವಾಯಿತು.  ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಿಲ್ಲ ಎಂದು ಹಂತಕರು ಊಹಿಸಿದ್ದರು.  ಇದೇ ಕಾರಣಕ್ಕೆ ಭಗವಾನ್ ಹತ್ಯೆಗೆ ಮುಂದಾಗಿದ್ದರು. 

ಮಹಾರಾಷ್ಟ್ರದಲ್ಲಿ ಇಬ್ಬರು ವಿಚಾರವಾದಿಗಳ ಹತ್ಯೆಯಾಗಿತ್ತು.  ಅಲ್ಲಿನ ಸರ್ಕಾರ ಎಸ್ಐಟಿ ಮತ್ತು ಸಿಬಿಐ ತನಿಖೆಗೆ ಅದೇಶಿಸಿತ್ತು. ಸಿಬಿಐ ತನಿಖೆ ಮಾಡಿದ್ರೂ  ಹಂತಕರನ್ನ ಪತ್ತೆ ಹಚ್ಚುವಲ್ಲಿ ವಿಫಲವಾಗಿತ್ತು.  ಸಿಬಿಐನಿಂದ ಆಗದ್ದು ರಾಜ್ಯ ಪೊಲೀಸರಿಂದ ಏನ್ ಅಗುತ್ತೆ ಎಂದು ಹಂತಕರು ಶಂಕಿಸಿದ್ದರು.  ಆದರೆ ಅವರ ಊಹೆ ತಲೆಕೆಳಗಾಗಿದೆ. 

ಎಸ್ಐಟಿ ತನಿಖೆಯನ್ನ ನೆಗ್ಲೆಟ್ ಮಾಡಿ ಪ್ರೊ ಕೆ ಎಸ್ ಭಗವಾನ್ ಹತ್ಯೆಗೆ ಹಂತಕರು ಸ್ಕೇಚ್ ಹಾಕಿದ್ದರು.  ಭಗವಾನ್ ಹತ್ಯೆಗೆ ಪಿಸ್ತೂಲ್ ಸಾಗಾಟ ಮಾಡುವ ವೇಳೆ ನವೀನ್ ಕುಮಾರ್ ಸಿಕ್ಕಿಬಿದ್ದ.  ನವೀನ್ ಬಂಧನದ ಬಳಿಕ ಇಡೀ ಹಂತಕರ ಟೀಂ ಎಸ್ಐಟಿ ಬಲೆಗೆ ಬಿತ್ತು!
 

loader