ಗೌರಿ ಲಂಕೇಶ್ ಹತ್ಯೆ ಪ್ರಕರಣ : ಹೊಟ್ಟೆ ಮಂಜ ಬಾಯ್ಬಿಟ್ಟ ಸತ್ಯವೇನು..?

First Published 9, Mar 2018, 8:31 AM IST
Gauri Lankesh Murder Case
Highlights

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಹೊಟ್ಟೆ ಮಂಜನ ವಿಚಾರಣೆ ನಡೆದಿದೆ. ಎಸ್ಐಟಿಯಿಂದ ವಿಚಾರಣೆ ನಡೆಸಲಾಗಿದ್ದು, ಪದೇ ಪದೇ ಕೇಳಿದ ಪ್ರಶ್ನೆಗಳನ್ನೇ ಕೇಳಿ ಗೊಂದಲ ಸೃಷ್ಟಿಸಿ ಆತನ ಬಾಯಿ ಬಿಡಿಸುವ ಯತ್ನ ಮಾಡಲಾಗಿದೆ.

ಬೆಂಗಳೂರು : ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಹೊಟ್ಟೆ ಮಂಜನ ವಿಚಾರಣೆ ನಡೆದಿದೆ. ಎಸ್ಐಟಿಯಿಂದ ವಿಚಾರಣೆ ನಡೆಸಲಾಗಿದ್ದು, ಪದೇ ಪದೇ ಕೇಳಿದ ಪ್ರಶ್ನೆಗಳನ್ನೇ ಕೇಳಿ ಗೊಂದಲ ಸೃಷ್ಟಿಸಿ ಆತನ ಬಾಯಿ ಬಿಡಿಸುವ ಯತ್ನ ಮಾಡಲಾಗಿದೆ.

ಈ ವೇಳೆ ಆತ ಬೇರೆ ಬೇರೆ ರೀತಿಯಲ್ಲಿಯೇ ಉತ್ತರ ನೀಡಿ ತನಿಖೆಯನ್ನು ಕೂಡ ಗೊಂದಲಕ್ಕೆ ಈಡು ಮಾಡಿದ್ದ ಎನ್ನಲಾಗಿದೆ.  ಗೌರಿ ಕೇಸ್ ನಲ್ಲಿ ಹೊಟ್ಟೆ ಮಂಜನ ಲಿಂಕ್ ಪತ್ತೆಗೆ ಪೊಲೀಸರು ಹರಸಾಹಸ ಮಾಡಿದ್ದು, ತಲೆನೋವಾಗಿದ್ದ ನವೀನ್​​ ವಿಚಾರಣೆ ಯಶಸ್ವಿಯಾಗಿ ಮುಗಿಸಲಾಗಿದೆ.

ಸತ್ಯ ಪತ್ತೆಗೆ ಸೀಕ್ರೆಟ್ ಆಪರೇಷನ್!

ಆತನಿಂದ ಸತ್ಯವನ್ನು ಹೊರತರುವ ಸಲುವಾಗಿ ಸೀಕ್ರೇಟ್ ಆಪರೇಷನ್ ಮಾಡಲಾಗಿದೆ. ಹೊಟ್ಟೆ ಮಂಜನಿಂದ ಸತ್ಯ ಬಾಯಿಬಿಡಿಸಲು ಅಧಿಕಾರಿಗಳು ಹರಸಾಹಸ ಮಾಡಿದ್ದಾರೆ. ಈ ವೇಳೆ ತನಿಖಾಧಿಕಾರಿಗಳ ಮಾಸ್ಟರ್ ಪ್ಲಾನ್​​ ಮಾಡಿದ್ದು, ಮೈಂಡ್ ಗೇಮ್ ತಂತ್ರದ ಮೂಲಕ ಹೊಟ್ಟೆ ಮಂಜನಿಂದ ಸತ್ಯ ಬಾಯ್ಬಿಡಿಸಲು ಯಶಸ್ವಿಯಾಗಿದ್ದಾರೆ.

ಆಪರೇಷನ್ ರಚಿತಾ

ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಪ್ರಕರಣಕ್ಕೆ ರಚಿತಾ ಎಂಬ ಅಧಿಕಾರಿ ಎಂಟ್ರಿಯಾಗಿದ್ದು, ಎಸ್ಐಟಿ ವಿಚಾರಣಾ ಪ್ರಕ್ರಿಯೆಗೆ ಸಿಬಿಐ ಜಂಟಿ ನಿರ್ದೇಶಕಿಯಾಗಿರುವ  ಡಾ.ರಚಿತಾ ಶೆಟ್ಟಿ ನೆರವು ನೀಡಿದ್ದಾರೆ.   ಅರ್ಧ ಗಂಟೆ ಆಪರೇಷನ್ ಮೂಲಕ ರಚಿತಾ ವಿವಿಧ ಪ್ರಶ್ನೆ ಕೇಳುವ ಮೂಲಕ ಆತನನ್ನು ಬಾಯಿ ಬಿಡಿಸಿದ್ದಾರೆ. ಪೊಲೀಸ್ ಟ್ರೀಟ್ ಮೆಂಟ್ ಹಾಗೂ ಅಧಿಕಾರಿ ರಚಿತಾ ಅವರು ಮಂಜನನ್ನು ಬಾಯಿ ಬಿಡಿಸಿದ್ದು, ಕೊನೆಗೂ ಆತನ ಗೌರಿ ಹಂತಕರಿಗೂ ತನಗೂ ಪರಿಚಯ ಇರುವುದಾಗಿ ಒಪ್ಪಿಕೊಂಡಿದ್ದಾನೆ.

loader