ಗೌರಿ ಲಂಕೇಶ್ ಅವರ ಹಂತಕರ ಜಾಡು ಪತ್ತೆಗೆ ಹರಸಾಹಸ ಪಡುತ್ತಿರುವ ಎಸ್‌ಐಟಿ ತಂಡವು, ನಗರ ವ್ಯಾಪ್ತಿಯಲ್ಲಿ ಹತ್ಯೆಗೂ ಮುನ್ನ 7 ದಿನಗಳ ಅವಧಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸುತ್ತಿದೆ.

ಬೆಂಗಳೂರು: ಗೌರಿ ಲಂಕೇಶ್ ಅವರ ಹಂತಕರ ಜಾಡು ಪತ್ತೆಗೆ ಹರಸಾಹಸ ಪಡುತ್ತಿರುವ ಎಸ್‌ಐಟಿ ತಂಡವು, ನಗರ ವ್ಯಾಪ್ತಿಯಲ್ಲಿ ಹತ್ಯೆಗೂ ಮುನ್ನ 7 ದಿನಗಳ ಅವಧಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೆಜೆಸ್ಟಿಕ್, ರೈಲ್ವೆ, ಮೆಟ್ರೋ ನಿಲ್ದಾಣಗಳು, ನಗರದ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳ ಟೋಲ್ ಗಳು ಸೇರಿದಂತೆ ಪ್ರಮುಖ ಜನ ಸಂಚಾರ ಪ್ರದೇಶಗಳ ಕಡೆಗೆ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಪರೀಕ್ಷಿಸುತ್ತಿದ್ದಾರೆ.

ಈವರೆಗೆ ಹಂತಕರ ಸುಳಿವು ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಗೌರಿ ಅವರ ಮನೆ ಸಿಸಿಟಿವಿಯಲ್ಲಿ ಆಗಂತುಕನ ಚಲನವನವು ಸೆರೆಯಾಗಿದ್ದು, ಆ ದೃಶ್ಯಾವಳಿಗಳಲ್ಲಿ ಆತನ ಚಹರೆ ಅಸ್ಪಷ್ಟವಾಗಿದೆ.