ಬೆಂಗಳೂರು :  ಇಡೀ ವಿಧಾನಸೌಧವನ್ನೇ ನಡುಗಿಸುವ ಕ್ರಿಮಿನಲ್ ಸ್ಕೆಚ್ ಬಗ್ಗೆ ಸ್ಫೋಟಕ ಸುದ್ದಿಯೊಂದು ಬಯಲಾಗಿದೆ. ಗೌರಿ ಕೊಂದ ಆರೋಪಿಗಳು ರಾಜ್ಯದ ಇಬ್ಬರು ಪ್ರಮುಖ ನಾಯಕರನ್ನು  ಹತ್ಯೆ ಮಾಡಲು ಸಂಚು ರೂಪಿಸಿರುವ ವಿಚಾರವೀಗ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 

ಎಸ್ ಐಟಿ ಅಧಿಕಾರಿಗಳು ಗೌರಿ ಹಂತಕರಾದ ಪರಶುರಾಮ್ ವಾಗ್ಮೋರೆ ತಂಡವನ್ನು  ತನಿಖೆ ನಡೆಸುತ್ತಿದ್ದು  ಈ ವೇಳೆ ಅವರ ಟಾರ್ಗೆಟ್ ಲಿಸ್ಟ್ ನಲ್ಲಿ ಮಾಜಿ ಸಚಿವರಾದ ಎಂ.ಬಿ ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಹೆಸರು ಇರುವ ಅಂಶ ಬೆಳಕಿಗೆ ಬಂದಿದೆ. 

ಲಿಂಗಾಯತ ಧರ್ಮ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ  ಎಂ.ಬಿ ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಹತ್ಯೆಗೆ  ಸಂಚು ಹೂಡಿದ್ದರು. ಎಸ್ ಐಟಿ ತನಿಖೆ ಈ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. 
 
ಪ್ರತ್ಯೇಕ ಧರ್ಮದ ಬೇಡಿಕೆಯಿಟ್ಟಿದ್ದ ಸಚಿವ ಎಂ.ಬಿ ಪಾಟೀಲ್ ಮತ್ತು ಮಾಜಿ ಶಾಸಕ ವಿನಯ್ ಕುಲಕರ್ಣಿ ನಡೆಯಿಂದ ಕೆಂಡಾಮಂಡಲವಾಗಿದ್ದ ಗೌರಿ ಹಂತಕರು ಸೇಡು ತೀರಿಸಿಕೋಳ್ಳಲು ಹತ್ಯೆಗೆ  ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.